ಸೋಮವಾರಪೇಟೆ, ಸೆ. ೨೪: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪಳ್ಳಿ ಗ್ರಾಮದಲ್ಲಿ ಕೇರೆ ಹಾವನ್ನು ನುಂಗಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಅನುಷ್ ಸೆರೆ ಹಿಡಿದು, ನಂತರ ಅರಣ್ಯಕ್ಕೆ ಬಿಟ್ಟರು.

ಹರಪಳ್ಳಿ ಗ್ರಾಮದ ಹೆಚ್.ಎ. ಸೋಮಯ್ಯ ಅವರ ಗದ್ದೆಯಲ್ಲಿ ಸುಮಾರು ೧೩ ಅಡಿ ಉದ್ದದ ಕಾಳಿಂಗ ಸರ್ಪವು ಬೀಡುಬಿಟ್ಟಿತ್ತು. ಈ ಬಗ್ಗೆ ಮಾಹಿತಿ ಪಡೆದ ಸ್ನೇಕ್ ಅನುಷ್ ಮತ್ತು ಗಿರಿ ಅವರುಗಳು ಸ್ಥಳಕ್ಕೆ ತೆರಳಿ ಕಾಳಿಂಗವನ್ನು ಸೆರೆ ಹಿಡಿದ ಸಂದರ್ಭ, ಅದು ಕೇರೆ ಹಾವನ್ನು ಮುಕ್ಕಾಲು ಭಾಗ ನುಂಗಿರುವುದು ಕಂಡುಬAತು.

ಕೇರೆ ಹಾವಿನ ಸಹಿತ ಕಾಳಿಂಗ ಸರ್ಪವನ್ನು ಮನೆಯ ಅಂಗಳಕ್ಕೆ ತಂದು ಕೆಲಕಾಲ ಹಾಗೆಯೇ ಬಿಟ್ಟಿದ್ದು, ಈ ಸಂದರ್ಭ ಕಾಳಿಂಗ ಸರ್ಪವು ಹಾವನ್ನು ಹೊರಹಾಕಿತು. ನಂತರ ಕಾಳಿಂಗವನ್ನು ಪುಷ್ಪಗಿರಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.