ಮಡಿಕೇರಿ, ಸೆ. ೨೪: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ ಶನಿವಾರ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಅವರು ಸಂಘದ ಬೆಳವಣಿಗೆ ಕುರಿತು ಈ ಕೆಳಗಿನಂತೆ ವಿವರಣೆ ನೀಡಿದರು.

ಸಂಘವು ದಿನಾಂಕ ೨೨.೧೨.೨೦೦೨ ರಂದು ಪ್ರಾರಂಭಗೊAಡು ಸುಮಾರು ೨೧ ವರ್ಷದಿಂದ ತನ್ನ ಸ್ವಂತ ಬಂಡವಾಳದಿAದ ವ್ಯವಹಾರ ನಡೆಸುತ್ತಾ ಬಂದಿದೆ. ತಾ. ೩೧-೦೩-೨೦೨೩ಕ್ಕೆ ಸಂಘದಲ್ಲಿ ಒಟ್ಟು ೧೮೩೩ ಸದಸ್ಯರಿರುತ್ತಾರೆ. ಸದಸ್ಯರಿಂದ ಒಟ್ಟು ರೂ. ೭೨,೧೭,೫೦೦ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್ ಡ್ರಾಫ್ಟ್ ಸಾಲ ಮತ್ತು ಸಿಬ್ಬಂದಿಗಳಿಗೆ ಆಸಾಮಿ ಸಾಲ ನೀಡಲಾಗುತ್ತಿದೆ. ತಾ. ೩೧.೦೩.೨೩ ರ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ. ೨೬,೫೨,೧೦,೯೩೬ ಠೇವಣಾತಿ ಸಂಗ್ರಹಿಸಲಾಗಿದೆ ಹಾಗೂ ರೂ. ೭,೦೬,೭೯,೧೧೬ ವಿವಿಧ ಸಾಲ ನೀಡಲಾಗಿದೆ. ಅಲ್ಲದೆ ಸಂಘವು ೨೦೦೬-೦೭ನೇ ಸಾಲಿನಿಂದ ಲಾಭದಲ್ಲಿ ನಡೆಯುತ್ತಿದೆ. ತಾ.೩೧-೦೩-೨೩ ರ ಅಂತ್ಯಕ್ಕೆ ಸಂಘವು ರೂ. ೪,೫೧,೦೦೦ ಲಾಭ ಗಳಿಸಿರುತ್ತದೆ. ೨೦೧೮ರ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾದ ತೊಂದರೆ ಹಾಗೂ ಈ ಹಿಂದಿನ ವರ್ಷದ ಕೊರೊನ ಸಾಂಕ್ರಾಮಿಕ ರೋಗದಿಂದಾಗಿ ಸಾಲ““ವಸೂಲಾತಿಯಲ್ಲಿ ಹಿನ್ನಡೆ ಉಂಟಾಗಿರುವುದರಿAದ ಲಾಭ ಕಡಿಮೆ ಆಗಿರುತ್ತದೆ.

ಈಗಾಗಲೇ ಸಂಘಕ್ಕೆ ಒಂದು ಸ್ವಂತ ಕಟ್ಟಡವನ್ನು ಖರೀದಿಸಲಾಗಿದ್ದು, ಕಟ್ಟಡದ ಕೆಳಗಿನ ಅಂತಸ್ತಿನಲ್ಲಿ ಸಂಘದ ದಿನನಿತ್ಯದ ವ್ಯವಹಾರವನ್ನು ನಡೆಸಲಾಗುತ್ತಿದ್ದು ಮೇಲಿನ ಅಂತಸ್ತನ್ನು ಸಭೆ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ.

ಸಂಘದ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ೨೦೦೭ನೇ ಡಿಸೆಂಬರ್ ತಿಂಗಳಲ್ಲಿ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಹಾಗೂ ೨೦೧೨ರಲ್ಲಿ ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಸಂಘದ ಒಂದೊAದು ಶಾಖೆಯನ್ನು ಪ್ರಾರಂಭಿಸಲಾಗಿದೆ. ಎರಡೂ ಶಾಖೆಗಳ ವ್ಯವಹಾರವು ಚೆನ್ನಾಗಿ ನಡೆಯುತ್ತಿದೆ.

ಸಂಘದಲ್ಲಿ ಒಟ್ಟು ೨೦ ಜನ ಪಿಗ್ಮಿ ಸಂಗ್ರಹಗಾರರಿದ್ದು, ಜಿಲ್ಲೆಯ ಹಲವು ಕಡೆಗಳಲ್ಲಿ ದಿನನಿತ್ಯ ಪಿಗ್ಮಿ ಠೇವಣಿ ಸಂಗ್ರಹಿಸುತ್ತಿದ್ದಾರೆ. ಸಂಘದಲ್ಲಿ ನಿರಖು ಠೇವಣಿಗಳಿಗೆ ಹೆಚ್ಚಿಗೆ ಬಡ್ಡಿ ದರವನ್ನು ನೀಡಲಾಗುತ್ತಿದೆ ಎಂದು ಅವರು ಮಾಹಿತಿಯಿತ್ತರು.

ಉಪಾಧ್ಯಕ್ಷರಾದ ಬಿ.ರಾಮಕೃಷ್ಣಯ್ಯ, ನಿರ್ದೇಶಕರುಗಳಾದ ಕೆ.ಎಂ.ಗಣೇಶ್, ಕೆ.ಬಿ. ಗಿರೀಶ್ ಗಣಪತಿ, ಬಾಬು ಚಂದ್ರ ಉಳ್ಳಾಗಡ್ಡಿ, ಸವಿತ ರೈ, ಮುನೀರ್ ಅಹಮ್ಮದ್, ಎಂ.ಪಿ. ಕಾವೇರಪ್ಪ, ಎಂ. ಬಿಜಾಯ್, ಅನಿಲ್ ಹೆಚ್.ಕೆ, ಮ್ಯಾಥ್ಯೂ ಕೆ.ಇ, ಬಿ. ಜನಾರ್ಧನ ಪ್ರಭು, ಡೆನ್ನಿ ಬರೋಸ್, ಜಯಂತಿ ಎಸ್.ಎಂ, ನಾಗೇಶ್ ಕೆ.ಎಸ್, ನರಸಿಂಹ ಡಿ. ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ಯಾಮಲ ಟಿ.ಡಿ. ಉಪಸ್ಥಿತರಿದ್ದರು. ಸದಸ್ಯರು ಸಭೆಯಲ್ಲಿ ವಿವಿಧ ಸಲಹೆಗಳನ್ನಿತ್ತರು.