ಚೆಟ್ಟಳ್ಳಿ, ಸೆ. ೨೨: ಹಿಂದೂ ಮಲಯಾಳ ಸಮಾಜಂ ವತಿಯಿಂದ ೧೫ನೇ ವರ್ಷದ ಓಣಂ ಆಚರಣೆಯನ್ನು ತಾ. ೨೪ರಂದು ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ. ಸುರೇಶ್‌ಬಾಬು ತಿಳಿಸಿದ್ದಾರೆ.

ಬೆಳಿಗ್ಗೆ ೬.೩೦ ರಿಂದ ೯ ಗಂಟೆವರೆಗೆ ಪೂಕಳಂ (ಹೂವಿನ ರಂಗೋಲಿ) ಸ್ಪರ್ಧೆ ನಡೆಯಲಿದ್ದು, ಸಮಾಜದ ಗೌರವಾಧ್ಯಕ್ಷ ಎನ್. ಕುಟ್ಟನ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉಪಾಧ್ಯಕ್ಷ ಪಿ.ಕೆ. ವಿನೀಶ್, ಸದಸ್ಯ ಸುಲೋಚನ ನಾರಾಯಣ ಭಾಗವಹಿಸಲಿದ್ದಾರೆ. ೯.೩೦ಕ್ಕೆ ಮಂಗಳ ಸಭಾಂಗಣದಿAದ ಚೆಟ್ಟಳ್ಳಿ ಪಟ್ಟಣದವರೆಗೆ ಚಂಡೆ ಮೇಳಗಳೊಂದಿಗೆ ಶೋಭಾಯಾತ್ರೆ, ನಂತರ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾ ಕಾರ್ಯಕ್ರಮ, ಮಧ್ಯಾಹ್ನ ೧೨.೩೦ಕ್ಕೆ ಓಣಂಸದ್ಯ, ಅಪರಾಹ್ನ ೨ ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕçತಿಕ ಕಾರ್ಯಕ್ರಮ ಚೆಟ್ಟಳ್ಳಿ ಹಿಂದೂ ಮಲಯಾಳ ಸಮಾಜಂ ಅಧ್ಯಕ್ಷ ಕೆ.ಕೆ. ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಮಂಥರ್‌ಗೌಡ, ಚೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಿಂಧುರಾಜನ್, ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜಂನ ಮಾಜಿ ಅಧ್ಯಕ್ಷರುಗಳಾದ ಪಿ.ಕೆ. ಶಶಿಕುಮಾರ್, ವಿ.ಕೆ. ವಿನು, ಎನ್. ಚಂದ್ರನ್, ಒ.ಕೆ. ಶ್ರೀನಿವಾಸ್ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಹತ್ತನೇ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.