ಮಡಿಕೇರಿ, ಸೆ. ೨೨: ಸ್ಫೋಟಕ ಬಳಸದೇ ಗಣಿಗಾರಿಕೆ ನಡೆಸುವಂತೆ ಸೂಚನೆ ಹಿನ್ನೆಲೆಯಲ್ಲಿ ನೋಟೀಸ್ ಜಾರಿಗೊಳಿಸಲಾಗಿದೆ.
ಪೆರಾಜೆ ಗ್ರಾಮದ ಅಮೆಚೂರುನಲ್ಲಿ ಕರ್ಗಲ್ಲಿನ ಗಣಿಗಾರಿಕೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಇದರಿಂದ ಕಳೆದ ವರ್ಷದ ಭೂಕಂಪ ಸಂಭವಿಸಿದ ಹಿನ್ನೆಲೆ ಸಾರ್ವಜನಿಕÀರು ಸ್ಫೋಟಕ ಬಳಸದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದ್ದರು. ಆದರೂ ಕ್ರಮಕೈಗೊಂಡಿಲ್ಲ. ಇದೀಗ ಶಾಸಕ ಪೊನ್ನಣ್ಣ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಸ್ಪಂದಿಸಿದ ಶಾಸಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ ಕೂಡಲೇ ಇಲಾಖೆಯ ಅಧಿಕಾರಿ ಪರಿಶೀಲನೆ ನಡೆಸಿ, ಸ್ಫೋಟಕ ಬಳಸದೆ, ಮಾನವ ಶ್ರಮದ ಮೂಲಕ ಗಣಿಗಾರಿಕೆ ನಡೆಸುವಂತೆ ಗಣಿಗಾರಿಕೆಯ ಪಾಲುದಾರ ಗಣೇಶ್ ಭಟ್‌ಗೆ ನೋಟೀಸ್ ನೀಡಿದ್ದಾರೆ. ತಪ್ಪಿದಲ್ಲಿ ಕೆ.ಎಂ.ಎA.ಸಿ.ಆರ್ ೧೯೯೪ ರ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳುವುದಾಗಿ ಕೊಡಗು ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಪೆರಾಜೆ ಶ್ರೀ ಶಾಸ್ತಾವು ದೇವಳದಲ್ಲಿ ಸ್ಥಳೀಯರು ಮತ್ತು ಸಾರ್ವಜನಿಕರು ಯಾವುದೇ ಅನಾಹುತ ಸಂಭವಿಸದಿರಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.