ಸೋಮವಾರಪೇಟೆ, ಸೆ.೨೨ : ಬೆಂಗಳೂರಿನಲ್ಲಿ ತಾ. ೨೫ರಿಂದ ೨೮ರವರೆಗೆ ಆಯೋಜನೆಗೊಂಡಿರುವ ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಸಮ್ಮೇಳನದಲ್ಲಿ ಬಹುಮುಖ್ಯವಾಗಿ ಉತ್ಪಾದನ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ಕರ್ನಾಟಕ ರೈತ ಸಂಘ ಆಕ್ಷೇಪಿಸಿದ್ದು, ತಾ. ೨೫ರಂದು ಕರ್ನಾಟಕ ಮಲೆನಾಡು ಕಾಫಿ ತೋಟ ಕಾರ್ಮಿಕರ ಸಂಘಟನೆಯಿAದ ಕಾಫಿ ತೋಟ ಕಾರ್ಮಿಕರ ಬೃಹತ್ ಸಮಾವೇಶ ಆಯೋಜಿಸಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೆಚ್.ಇ. ಸಣ್ಣಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೫ರಂದು ಬೆಳಿಗ್ಗೆ ೧೧ ಗಂಟೆಗೆ ಚಿಕ್ಕಮಗಳೂರಿನಲ್ಲಿ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟ ಕಾರ್ಮಿಕರ ಸಮಾವೇಶ ನಡೆಯಲಿದ್ದು, ಜಿಲ್ಲೆಯಿಂದಲೂ ನೂರಾರು ಮಂದಿ ಭಾಗವಹಿಸಲಿದ್ದೇವೆ ಎಂದರು.

ಅAತರರಾಷ್ಟಿçÃಯ ಕಾಫಿ ಸಮ್ಮೇಳನದಲ್ಲಿ ಪ್ರಮುಖ ಉತ್ಪಾದನ ಶಕ್ತಿಯಾಗಿರುವ ಕಾಫಿ ತೋಟ ಕಾರ್ಮಿಕರ ಸಮಸ್ಯೆಗಳ ನಿವಾರಣೆ, ಸೌಲಭ್ಯಗಳನ್ನು ಕಲ್ಪಿಸುವುದು, ಕಾಯ್ದೆಗಳ ಜಾರಿ, ಮೂಲಭೂತ ಸೌಕರ್ಯ, ಭದ್ರತೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಯಾವುದೇ ಅಜೆಂಡಾ ಇಲ್ಲ. ಕೇವಲ ಕಾರ್ಪೋರೇಟ್ ಕಂಪೆನಿಗಳನ್ನು ಆಹ್ವಾನಿಸಲಾಗಿದೆ. ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಸಿಪಿಐಎಂಎಲ್‌ನ ಜಿಲ್ಲಾ ಸಮಿತಿಯ ಕೆ.ಟಿ. ಆನಂದ ಅವರುಗಳು ಉಪಸ್ಥಿತರಿದ್ದರು.