ಕೆನಡಾದಲ್ಲಿ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ
ನವದೆಹಲಿ, ಸೆ. ೨೧: ಭಾರತದ ವೀಸಾ ಸೇವೆಯು ಕೆನಡಾ ಪ್ರಜೆಗಳಿಗೆ ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೆನಡಾ ಪ್ರಜೆಗಳ ವೀಸಾ ಅರ್ಜಿಗಳ ಆರಂಭಿಕ ಪರಿಶೀಲನೆ ನಡೆಸುವ ಖಾಸಗಿ ಏಜೆನ್ಸಿ ‘ಬಿಎಲ್ಎಸ್ ಇಂಟರ್ನ್ಯಾಷನಲ್' ತನ್ನ ವೆಬ್ಸೈಟ್ನಲ್ಲಿ ಭಾರತೀಯ ವೀಸಾ ಸೇವೆಯನ್ನು ‘ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ' ಎಂದು ತಿಳಿಸಿದೆ. ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದರು. ಇದರಿಂದಾಗಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿದ್ದು, ಈ ನಡುವೆಯೇ ವೀಸಾ ಸ್ಥಗಿತ ಕ್ರಮ ಕೈಗೊಳ್ಳಲಾಗಿದೆ. ನಿಜ್ಜರ್ ಹತ್ಯೆ ವಿಚಾರವಾಗಿ ಉಭಯ ರಾಷ್ಟçಗಳು ರಾಯಭಾರಿಗಳನ್ನು ಉಚ್ಚಾಟಿಸಿವೆ. ಟ್ರುಡೊ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ‘ಇದು ಅಸಂಬದ್ಧ ಮತ್ತು ಅರ್ಥಹೀನ' ಎಂದು ಹೇಳಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿಕೆ ಬೆನ್ನಲ್ಲೇ ಭಾರತ-ಕೆನಡಾ ಸಂಬAಧ ಹಳಸಿರುವಾಗಲೇ ಮತ್ತದೇ ಕೆನಡಾದಲ್ಲಿ ಮತ್ತೋರ್ವ ಖಲಿಸ್ತಾನಿ ಉಗ್ರನ ಹತ್ಯೆಯಾಗಿದೆ. ಕೆನಡಾದಲ್ಲಿ ನಡೆದ ಗ್ಯಾಂಗ್ ಹಿಂಸಾಚಾರದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖದೂಲ್ ಸಿಂಗ್ ಅಲಿಯಾಸ್ ಸುಖಾ ಡುನೆಕೆಯನ್ನು ಕೆನಡಾದ ವಿನ್ನಿಪೆಗ್ನಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಆ ಮೂಲಕ ಮತ್ತೆ ಕೆನಡಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಖಲಿಸ್ತಾನಿ ಉಗ್ರ ಸುಖ್ ಧೂಲ್ ಸಿಂಗ್ ಅಲಿಯಾಸ್ ಸುಖಾ ದುನೆಕೆ ಹತ್ಯೆ ಮಾಡಿದ್ದು ನಾವೇ ಎಂದು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ.
ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿದ ಬಿ.ಜೆ.ಡಿ.
ಭುವನೇಶ್ವರ, ಸೆ. ೨೧: ಒಡಿಶಾದ ಆಡಳಿತರೂಢ ಬಿಜೆಡಿಯು ತನ್ನ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಖಂದಪಡ ಕ್ಷೇತ್ರದ ಶಾಸಕ ಸೌಮ್ಯ ರಂಜನ್ ಪಟ್ನಾಯಕ್ ಮತ್ತು ರೆಮುನಾದ ಶಾಸಕ ಸುಧಾಂಶು ಶೇಖರ್ ಪರಿದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಜನ ವಿರೋಧಿ ಕೆಲಸ ಮಾಡಿದ ಆರೋಪದ ಮೇಲೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಮಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ಸೌಮ್ಯ ರಂಜನ್ ಅವರನ್ನು ಸೆ. ೧೨ ರಂದು ಪಕ್ಷದ ಉಪಾಧ್ಯಕ್ಷರ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಅವರ ಸಂಪಾದಕತ್ವದ ಪತ್ರಿಕೆಯಲ್ಲಿ ತಮ್ಮದೇ ಪಕ್ಷವನ್ನು ಟೀಕೆ ಮಾಡಿ ಸಂಪಾದಕೀಯ ಬರೆದಿದ್ದರು. ತನ್ನ ಹುದ್ದೆಯನ್ನು ಮೀರಿ ಪ್ರಭಾವ ಬಳಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ವಿ.ಕೆ ಪಾಂಡಿಯನ್ ವಿರುದ್ಧ ಆರೋಪಿಸಿದ್ದರು. ಒಡಿಶಾ ಪೊಲೀಸ್ನ ಆರ್ಥಿಕ ಅಪರಾಧ ದಳ ಸೌಮ್ಯ ವಿರುದ್ಧ ಮೋಸ ಹಾಗೂ ವಂಚನೆ ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಿಸಿದ ಬೆನ್ನಲ್ಲೇ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಸಂಬದ್ ಪತ್ರಿಕೆಯ ೩೦೦ಕ್ಕೂ ಅಧಿಕ ಉದ್ಯೋಗಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಂತರ ರೂಪಾಯಿ ಸಾಲ ಪಡೆಯಲಾಗಿದೆ. ಇದು ಗಂಭೀರವಾದ ಬ್ಯಾಂಕ್ ವಂಚನೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಹಿ ಮಾಡಿರುವ ಪಕ್ಷದ ಪ್ರಕಟಣೆಯಲ್ಲಿ ಹೇಳಲಾಗಿದೆ.
ರೈಲು ನಿಲ್ದಾಣದಲ್ಲಿ ಕೂಲಿಗಳೊಂದಿಗೆ ಬೆರೆತ ರಾಹುಲ್
ನವದೆಹಲಿ, ಸೆ. ೨೧: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಆನಂದ ವಿಹಾರ್ ರೈಲು ನಿಲ್ದಾಣದಲ್ಲಿ ಇಂದು ಕೂಲಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು. ಕೂಲಿಗಳಂತೆ ಕೆಂಪು ಅಂಗಿ ಧರಿಸಿದ್ದ ಅವರು, ಸೂಟ್ಕೇಸ್ ಅನ್ನು ತಲೆ ಮೇಲೆ ಹೊತ್ತುಕೊಂಡಿರುವ ಹಾಗೂ ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊAಡಿದೆ.
ಹೊಸ ಸಮವಸ್ತç ಧರಿಸದಿರಲು ಸಂಸತ್ ಭದ್ರತಾ ಸಿಬ್ಬಂದಿಗಳ ನಿರ್ಧಾರ
ನವದೆಹಲಿ, ಸೆ. ೨೧: ಹೊಸ ಸಂಸತ್ ಭವನದ ಸಿಬ್ಬಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಸಮವಸ್ತçಗಳನ್ನು ಧರಿಸದಿರಲು ಸಂಸತ್ತಿನ ಭದ್ರತಾ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ವಿಶೇಷ ಅಧಿವೇಶನವು ಸೆಪ್ಟೆಂಬರ್ ೧೮ರಿಂದ ೨೨ರ ವರೆಗೆ ನಡೆಯುತ್ತಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಸಂಸತ್ ಸಿಬ್ಬಂದಿಯ ಸಮವಸ್ತçವನ್ನು ಬದಲಾವಣೆ ಮಾಡಿದೆ. ಸಮವಸ್ತçಗಳನ್ನು ಓಚಿಣioಟಿಚಿಟ Iಟಿsಣiಣuಣe oಜಿ ಈಚಿshioಟಿ ಖಿeಛಿhಟಿoಟogಥಿ (ಓIಈಖಿ) ವಿನ್ಯಾಸಗೊಳಿಸಿದೆ. ಹೊಸ ಸಮವಸ್ತçವು ಸಿಂಥೆಟಿಕ್ನದ್ದಾಗಿದ್ದು, ಶಾಖವನ್ನುಂಟುಮಾಡುತ್ತದೆ ಎಂದು ಭದ್ರತೆಗೆ ನಿಯೋಜನೆಗೊಂಡಿದ್ದ ಹಲವು ಸಿಬ್ಬಂದಿ ದೂರಿದ್ದಾರೆ. ಇದರ ಬೆನ್ನಲ್ಲೇ ಬುಧವಾರ ಬೆಳಿಗ್ಗೆ ನಡೆದ ಭದ್ರತಾ ವಿಭಾಗದ ತುರ್ತು ಸಭೆಯಲ್ಲಿ, ಹಳೇ ಸಮವಸ್ತçವನ್ನೇ ಧರಿಸಲು ತೀರ್ಮಾನಿಸಲಾಗಿದೆ. ಭದ್ರತಾ ವಿಭಾಗದ ಸಿಬ್ಬಂದಿಗೆ ನೀಲಿ ಸಫಾರಿ ಸೈಟ್ಗಳಿಗೆ ಬದಲಾಗಿ, ಮಿಲಿಟರಿ ಮಾದರಿಯ ಸಮವಸ್ತçಗಳನ್ನು ನೀಡಲಾಗಿತ್ತು. ಹಲವರು ಸಮವಸ್ತçದ ಬಗ್ಗೆ ದೂರು ನೀಡಿದ್ದರಿಂದ ಮುಂದಿನ ಆದೇಶದವರೆಗೆ ಹಳೇ ಸಮವಸ್ತçವನ್ನೇ ಧರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.