ಮಡಿಕೇರಿ, ಸೆ. ೨೨: ಬೆಂಗಳೂರು ಕೊಡವ ಸಮಾಜದ ಕೈಲ್ಪೊಳ್ದ್ ಒತ್ತೊರ್ಮೆ ಕೂಟದಲ್ಲಿ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ಕೈಲ್ ಪೊಳ್ದ್ ಒತ್ತೊರ್ಮೆ ಕೂಟಕ್ಕೆ ಆಗಮಿಸಿದ್ದ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಚೆಪ್ಪುಡಿರ ಎಂ. ಪೂಣಚ್ಚ, ರಾಜ್ಯ ಸಾರ್ವಜನಿಕ ಅಭಿಯೋಜಕ ಬಲ್ಲಚಂಡ ಎ. ಬೆಳ್ಯಪ್ಪ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಕರವಟ್ಟಿರ ಟಿ. ಪೆಮ್ಮಯ್ಯ ಅವರುಗಳು ನಾಚಯ್ಯ ಅವರಿಗೆ ಸನ್ಮಾನಿಸಿದರು.
ಈ ವೇಳೆ ಸಮಾಜದ ಉಪಾಧ್ಯಕ್ಷೆ ಪಾಂಡAಡ ಕಮಲ, ಗೌ.ಕಾರ್ಯದರ್ಶಿ ಲೆ.ಕ. ಚಿರಿಯಪಂಡ ವಿವೇಕ್ ಮುತ್ತಣ್ಣ (ರಿ), ಖಜಾಂಚಿ ಬಲ್ಯಮೀದೇರಿರ ಗಣೇಶ್, ಜಂಟಿ ಕಾರ್ಯದರ್ಶಿ ಬೊಪ್ಪಂಡ ಮಹೇಶ್ ತಮ್ಮಯ್ಯ, ಜಂಟಿ ಖಜಾಂಚಿ ಪೊನ್ನಚೆಟ್ಟಿರ ರಮೇಶ್ ಗಣಪತಿ ಸೇರಿದಂತೆ ಇನ್ನಿತರರು ಹಾಜರಿದ್ದರು.