ಪೊನ್ನಂಪೇಟೆ, ಸೆ. ೨೨: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ೨೦೨೩-೨೦೨೪ ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘವನ್ನು ಗೋಣಿಕೊಪ್ಪಲು ಪೊಲೀಸ್ ಠಾಣೆಯ ಠಾಣಾಧಿಕಾರಿ ರೂಪಾದೇವಿ ಬಿರಾದಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಶಿಕ್ಷಣದ ಕಡೆಗೆ ಹೆಚ್ಚು ಗಮನ ನೀಡಿದರೆ, ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ. ಇಟ್ಟೀರ ಕೆ.ಬಿದ್ದಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ೨೦೨೨-೨೩ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಲೆಕ್ಕಶಾಸ್ತç ವಿಷಯದಲ್ಲಿ ಶೇ. ೧೦೦ ರಷ್ಟು ಅಂಕ ಗಳಿಸಿದ ಎಂ.ಎA. ಕಾರ್ಯಪ್ಪ, ಭೂಗೋಳಶಾಸ್ತç ವಿಷಯದಲ್ಲಿ ಶೇ. ೧೦೦ ರಷ್ಟು ಅಂಕ ಗಳಿಸಿದ ಟಿ.ಪಿ. ಪ್ರತಿಭಾ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ನೂತನವಾಗಿ ಆಯ್ಕೆಯಾದ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಕಾರ್ಯದರ್ಶಿ ಎನ್.ಆರ್. ರಾಕೇಶ್, ಎಂ. ಗ್ರೀಷ್ಮ ಉತ್ತಪ್ಪ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ವಿ. ರಚನ, ಕ್ರೀಡಾ ಕಾರ್ಯದರ್ಶಿ ಬಿ. ಥಾಮಸ್ ಅಂತೋಣಿ, ತರಗತಿ ಪ್ರತಿನಿಧಿಗಳಾದ ಪಿ.ಎಸ್. ಗೌತಮ್, ಪಿ.ಎ. ಮುನವೀರ, ಎಂ. ಜೀವನ್, ಎಸ್.ಆರ್. ಸಾನಿಯಾ, ಕೆ.ಬಿ. ನಿತಿನ್ ಬೋಪಣ್ಣ, ಎನ್.ಎನ್. ದೀಪಿಕಾ, ಎಂ.ಜೆ. ಬಿಷನ್ ಬಿದ್ದಪ್ಪ, ಎನ್.ಆರ್. ವಿನ್ಯ, ಎಸ್. ಶ್ರೇಯಸ್, ಸಿ.ಎಸ್. ಸಜ್ನ, ಎ.ಎಸ್. ಶಿಫಾನ, ಹೆಚ್.ಪಿ. ತಾಂಜನ್, ಟಿ.ವಿ. ಅದ್ವೆöÊತ್ ಕೃಷ್ಣ, ಸಿ.ಎನ್. ಯಶ್ಮ ಅವರುಗಳಿಗೆ ಅತಿಥಿಗಳು ಬ್ಯಾಡ್ಜ್ ತೊಡಿಸಿದರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಉಪಪ್ರಾಂಶುಪಾಲೆ ಎಂ.ಬಿ. ಪದ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಬಿ. ಪೂವಮ್ಮ ಇನ್ನಿತರರು ಇದ್ದರು.