ಕಣಿವೆ, ಸೆ. ೨೨: ಕುಶಾಲನಗರ ತಾಲೂಕಿನ ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ತನ್ನ ೬ ಗ್ರಾಹಕರ ಶಾಖೆಗಳ ಮೂಲಕ ನಿಯಂತ್ರಿತ ಹಾಗೂ ಅನಿಯಂತ್ರಿತ ವ್ಯಾಪಾರವನ್ನು ಮಾಡುತ್ತಿದ್ದು ೧೩,೧೩,೮೩೦ ರೂಗಳ ಕಿರು ಅರಣ್ಯ ಉತ್ಪನ್ನಗಳನ್ನು ಖರೀದಿಸಿ ೧೬,೬೪,೪೧೨ ರೂಗಳ ಮಾರಾಟ ವಹಿವಾಟು ನಡೆಸಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್.ಅರುಣರಾವ್ ತಿಳಿಸಿದರು.

ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ೧೫,೧೬,೭೮೫ ರೂ.ಗಳ ನಿವ್ವಳ ಲಾಭವನ್ನು ಹೊಂದಿದ್ದು, ೪,೨೦,೧೫೮ ರೂ.ಗಳ ವ್ಯಾಪಾರ ಲಾಭವನ್ನು ಹೊಂದಿದೆ.

ಕಿರು ಅರಣ್ಯ ಉತ್ಪನ್ನಗಳಾದ ಸೀಗೆಕಾಯಿ, ಮರದಪಾಚಿ, ಜೇನು ಸಂಗ್ರಹಣೆಗಳನ್ನು ಅತ್ಯುತ್ತಮ ರೀತಿಯಲ್ಲಿ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ.

ಸಂಘದ ಅಭಿವೃದ್ದಿ ದೃಷ್ಟಿಯಿಂದ ಹುದುಗೂರು ಹಾಗೂ ಆಡಿನಾಡೂರು ಗ್ರಾಮಗಳಲ್ಲಿ ೨೫ ಲಕ್ಷ ರೂ.ಗಳ ವೆಚ್ಚದಲ್ಲಿ ನ್ಯಾಯಬೆಲೆ ಅಂಗಡಿಗಳ ಸ್ವಂತ ಕಟ್ಟಡಗಳನ್ನು ಹೊಂದುವ ಉದ್ದೇಶ ಹೊಂದಲಾಗಿದೆ. ಸಂಘದ ೩೯೧ ಸದಸ್ಯರಿಗೆ ಯಶಸ್ವಿನಿ ಯೋಜನೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ಸದಸ್ಯ ಮಾವಿನಹಳ್ಳದ ಕಾಳಿಂಗ ಮಾತನಾಡಿ, ಬಸವನಹಳ್ಳಿ ಸಹಕಾರ ಸಂಘದ ಆವರಣದಲ್ಲಿ ಈ ಹಿಂದಿನ ಅಧ್ಯಕ್ಷರಾದ ರಾಜಾರಾವ್ ಅವಧಿಯಲ್ಲಿ ನಿರ್ಮಿಸಿದ್ದ ಮೇಲ್ಛಾವಣಿಯ ದುರಸ್ತಿಯ ಬಾಕಿ ಹಣವನ್ನು ಪಾವತಿಸುವಂತೆ ಕಳೆದ ಮಹಾಸಭೆಯಲ್ಲಿ ತೀರ್ಮಾನ ವಾಗಿದ್ದರೂ ಕೂಡ ಇದೂವರೆಗೂ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮತ್ತೋರ್ವ ಸದಸ್ಯ ಶನಿವಾರಸಂತೆಯ ಹರೀಶ್ ಮಾತನಾಡಿ, ಸಂಘದ ವತಿಯಿಂದ ಸದಸ್ಯ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಸಂಬAಧಿಸಿದAತೆ ಹೈನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ, ಜೇನು ಪೆಟ್ಟಿಗೆಗಳ ನೀಡುವುದು ಮತ್ತಿತರ ಯೋಜನೆ ಗಳನ್ನು ಜಾರಿಗೊಳಿಸಬೇಕೆಂದು ಕೋರಿದರು.

ಸದಸ್ಯರಾದ ಗಂಗಾಧರ ಹಾಗೂ ಮೋಹನ್ ಮತ್ತಿತರರು ಸಂಘದ ಅಭಿವೃದ್ದಿಯ ಪ್ರಶ್ನೋತ್ತರಗಳಲ್ಲಿ ಪಾಲ್ಗೊಂಡರು.

ಸAಘದ ಉಪಾಧ್ಯಕ್ಷ ಮನು, ನಿರ್ದೇಶಕರಾದ ಸಿ.ಕೆ. ಉದಯ ಕುಮಾರ್, ಸುರೇಶ್, ಕಾವೇರಿ, ಆರ್.ಕೆ. ಚಂದ್ರು, ಕಮಲಮ್ಮ, ಅಣ್ಣಯ್ಯ, ಸರೋಜಾ, ಮಹಾ ಮಂಡಲದ ನಿರ್ದೇಶಕರಾದ ಮಿಟ್ಟು ರಂಜಿತ್, ಅರಣ್ಯ ಇಲಾಖೆಯ ದೇವಯ್ಯ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹನಿಕುಮಾರ್ ಇದ್ದರು. ಯಶವಂತ್ ಸ್ವಾಗತಿಸಿ ವಂದಿಸಿದರು.