ಮಡಿಕೇರಿ, ಸೆ. ೨೨: ಕೊಡಗು ಜಿಲ್ಲೆಗೆ ಪ್ರಸಕ್ತ ವರ್ಷಾರಂಭದಿAದ ಈತನಕ ೭೬.೦೨ ಇಂಚು ಸರಾಸರಿ ಮಳೆಯಾಗಿದೆ. ೨೦೨೨ಕ್ಕೆ ಹೋಲಿಸಿದರೆ, ಈ ಅವಧಿಯಲ್ಲಿ ಒಟ್ಟಾರೆಯಾಗಿ ೫೦.೧೩ ಇಂಚುಗಳಷ್ಟು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕ ಸರಾಸರಿ ೧೨೬.೧೫ ಇಂಚು ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ೭೦.೮೪ ಇಂಚುಗಳಷ್ಟು ಭಾರೀ ಕೊರತೆ ಕಂಡು ಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೮೨.೯೨ ಇಂಚುಗಳಷ್ಟು ಭಾರೀ ಮಳೆಯಾಗಿದ್ದರೆ ಈ ವರ್ಷ ೧೧೨.೦೯ ಇಂಚು ಮಳೆಯಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ೯೭.೮೬ ಇಂಚು ಹಾಗೂ ಈ ಬಾರಿ ೫೮.೨೩ ಇಂಚು ಮಳೆಯಾಗಿದ್ದು, ಈ ತಾಲೂಕಿನಲ್ಲೂ ೩೯.೬೩ ಇಂಚು ಕಡಿಮೆಯಿದೆ.

ಸೋಮವಾರಪೇಟೆ ತಾಲೂಕಿನಲ್ಲಿಯೂ ೩೯.೯೫ ಇಂಚು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ೯೭.೬೮ ಇಂಚು ಮಳೆಯಾಗಿತ್ತು. ಆದರೆ, ಈ ವರ್ಷ ಈತನಕದ ಅವಧಿಯಲ್ಲಿ ೫೭.೭೩ ಇಂಚು ಮಳೆಯಾಗಿದೆ.