ಮಡಿಕೇರಿ, ಸೆ. ೨೨: ಗಾಂಜಾ ಮಾರಾಟ ಹಾಗೂ ಸೇವನೆಯ ಪ್ರತ್ಯೇಕ ಪ್ರಕರಣಗಳಲ್ಲಿ ಈರ್ವರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಚೈನ್‌ಗೇಟ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಮಹದೇವಪೇಟೆ ನಿವಾಸಿ ಅಬ್ದುಲ್ ನಾಸೀರ್ (೨೬) ಎಂಬಾತನನ್ನು ಬಂಧಿಸಿ ಆತನಿಂದ ೨೦೭ ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಕ್ಕಾನ್ ಗಲ್ಲಿ ಬಳಿ ಗಾಂಜಾ ಸೇವಿಸುತ್ತಿದ್ದ ಮಹದೇವಪೇಟೆ ನಿವಾಸಿ ಸೈಫುದ್ದೀನ್ (೨೬) ಎಂಬಾತನನ್ನು ಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ. ಮಾದಕ ವಸ್ತು ತಡೆಗೆ ರಚನೆಯಾಗಿರುವ ಮಡಿಕೇರಿ ಡಿವೈಎಸ್‌ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್‌ಐ ಶ್ರೀನಿವಾಸ್, ಎ.ಬಿ. ರಾಧಾ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಪ್ರಕರಣ ಪತ್ತೆಹಚ್ಚಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.