ಶ್ರೀಮಂಗಲ, ಸೆ. ೨೨: ನಂ:೫೬೨ ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಪೊನ್ನಂಪೇಟೆ ಸಂಸ್ಥೆಯು ೧೭೮೩ ಜನ ಸದಸ್ಯರು ಹೊಂದಿದ್ದು, ೨೦೨೨-೨೩ರ ಸಾಲಿನ ಆರ್ಥಿಕ ವರ್ಷದಲ್ಲಿ ರೂ. ೨೩,೫೯,೭೮೭ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ. ೧೨ ಡಿವಿಡೆಂಡ್‌ನ್ನು ಮಹಾಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ ಹಾಗೂ ಆಡಿಟ್ ವರ್ಗೀಕರಣ “ಎ” ವರ್ಗ ಹೊಂದಿರುತ್ತದೆ ಎಂದು ಸಂಘದ ಅಧ್ಯಕ್ಷ ಅರಮಣಮಾಡ ಎಸ್. ಬೋಪಯ್ಯ ವಿವರಿಸಿದರು.

ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಪೂರ್ವ ಆಡಳಿತ ಮಂಡಳಿಯ ಸಭೆಯಲ್ಲಿ ಸಂಘದ ವಹಿವಾಟು ಹಾಗೂ ವ್ಯವಹಾರದ ಬಗ್ಗೆ ವಿವರಿಸಿದರು. ಸಂಘದಲ್ಲಿ ಅತ್ಯಂತ ಪಾರದರ್ಶಕತೆಯಿಂದ ಕೆಲಸ ಕಾರ್ಯಗಳು ನಡೆಯುತ್ತ ಬರುತ್ತಿದೆ. ಸಂಘದ ಸದಸ್ಯರಿಂದಲೂ ಹಾಗೂ ಸದಸ್ಯೇತರರಿಂದಲೂ ನಿರಖು ಠೇವಣಿ, ಸಂಚಯ ಠೇವಣಿ, ದೈನಂದಿನ ಠೇವಣಿ, ತ್ರೀಫ್ಟ್ ಠೇವಣಿ ಹೀಗೆ ವಿವಿಧ ರೀತಿಯ ಠೇವಣಿಯಾಗಿ ರೂ. ೧೯೦೧ ಲಕ್ಷ ಠೇವಣಿ ಹೊಂದಿರುತ್ತದೆ. ಸದಸ್ಯರಿಗೆ ಮತ್ತು ಸದಸ್ಯರೇತರರಿಗೂ ವಿವಿಧ ರೀತಿಯಲ್ಲಿ ಒಟ್ಟು ರೂ. ೧೮೨೫ ಲಕ್ಷ ಸಾಲ ವಿತರಿಸಲಾಗಿದೆ. ಸಾಲಗಳ ವಸೂಲಾತಿಯು ಶೇ. ೯೪ ಗುರಿ ಮುಟ್ಟಲಾಗಿದೆ ಎಂದು ತಿಳಿಸಿದರು.

ಸಂಘವು ಪೊನ್ನಂಪೇಟೆಯ ಹೃದಯಭಾಗದಲ್ಲಿ ಸ್ವಂತ ಕಟ್ಟಡವನ್ನು ಹೊಂದಿರುತ್ತದೆೆ. ಸಂಸ್ಥೆಯ ಸದಸ್ಯರ ಇನ್ನಿತರ ಸೌಲಭ್ಯಗಳಾದ ಮರಣ ನಿಧಿ ರೂ. ೧೦ ಸಾವಿರ ಹಾಗೂ ಸಹಕಾರಿ ಜೀವನಿಧಿ ರೂ.೧ ಲಕ್ಷ ಅವರ ನಾಮಿನಿಗೆ ಕೊಡಲಾಗುವುದು. ಅದು ಅಲ್ಲದೇ ಸಾಲಗಾರರ ಹಿತದೃಷ್ಟಿ ಯಿಂದ ಸಾಲಗಾರನು ಸಾಲ ಪಡೆದು ಸುಸ್ತಿಯಾಗದೇ ಮೃತಪಟ್ಟಲ್ಲಿ ಸಾಲಗಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ನಿಬಂಧನೆಗೆ ಒಳಪಟ್ಟು ರೂ. ೧ ಲಕ್ಷದ ಮಿತಿಯೊಳಗೆ ಮನ್ನಾ ಮಾಡಿಕೊಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ರೂ. ೨,೯೬,೭೮೪/-ನ್ನು ೬ ಜನ ಮೃತಪಟ್ಟ ಸಾಲಗಾರ ಸದಸ್ಯರ ಸಾಲ ಮನ್ನಾ ಮಾಡಲಾಗಿರುತ್ತದೆ. ಇದು ಯಾವುದೇ ಸಹಕಾರಿ ಸಂಸ್ಥೆಯಲ್ಲಿ ಇಲ್ಲದ ಈ ವ್ಯವಸ್ಥೆ ನಮ್ಮ ಸಂಘದಲ್ಲಿ ಅಳವಡಿಸಲಾ ಗಿರುತ್ತದೆ ಎಂಬುದನ್ನು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು. ಸಂಸ್ಥೆಯ ಲೆಕ್ಕ ಪತ್ರಗಳನ್ನು ಆಧುನಿಕವಾಗಿ ಗಣಕೀಕರಣ ಗೊಳಿಸಲಾಗಿದೆ. ಸದಸ್ಯರಿಗೆ ಲಾಕರ್ ಸೌಲಭ್ಯ, ಇ-ಸ್ಟಾಂಪಿAಗ್, ಮೊಬೈಲ್ ಹಾಗೂ ಟಿ.ವಿ. ರೀಚಾರ್ಜ್, ರೈಲ್ವೆ ಟಿಕೆಟ್ ಬುಕ್ಕಿಂಗ್, ಆರ್.ಟಿ.ಸಿ. ಸೇವಾ ಸೌಲಭ್ಯವನ್ನು ನೀಡಲಾಗುತ್ತಿದೆ. ಸಂಸ್ಥೆಯು ಗೋಣಿಕೊಪ್ಪದಲ್ಲಿ ಶಾಖೆಯನ್ನು ಹೊಂದಿದ್ದು, ಅಲ್ಲಿಯೂ ಸದಸ್ಯರಿಗೆ ಸೇವೆಯನ್ನು ಸಲ್ಲಿಸ ಲಾಗುತ್ತಿದೆ ಹಾಗೂ ಗೋಣಿಕೊಪ್ಪಲು ಶಾಖೆಯು ನಿವ್ವಳ ಲಾಭ ರೂ. ೭,೪೭,೮೮೮.೬೮ ಗಳಿಸಿದೆ. ಸಂಘದ ವಾರ್ಷಿಕ ಮಹಾಸಭೆಯು ತಾ. ೨೪ ರಂದು ಸಂಘದ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ವಿವರಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಚಿರಿಯ ಪಂಡ ಕೆ. ಕಾಶಿಯಪ್ಪ, ನಿರ್ದೇಶಕರಾದ ಕಡೇಮಾಡ. ಜಿ. ಭೀಮಯ್ಯ, ಕಬ್ಬಚೀರ ಎಂ. ಚಿದಂಬರ, ಕಳ್ಳಿಚಂಡ ಜಿ. ಕುಶಾಲಪ್ಪ, ಮುದ್ದಿಯಡ.ಪಿ. ಪ್ರಕಾಶ್, ಐನಂಡ ಕೆ. ಮಂದಣ್ಣ, ಕಳ್ಳಿಚಂಡ ಡಿ. ಪೂಣಚ್ಚ, ಗುಮ್ಮಟ್ಟೀರ ಜಿ. ಗಂಗಮ್ಮ, ಚೊಟ್ಟೆಕಾಳಪಂಡ ಪಿ. ಆಶಾ, ಕೋದೇಂಗಡ ಎಸ್. ಸುರೇಶ್, ಕೂಕಂಡ ಎನ್. ಕಾವೇರಪ್ಪ, ಮಾಣಿಪಂಡ ಜೆ. ಪಾರ್ವತಿ ಹಾಗೂ ಸಂಘದ ಸಿ.ಇ.ಓ. ಮದ್ರೀರ ಎಸ್. ಗಣಪತಿ ಹಾಜರಿದ್ದರು.