ಮಡಿಕೇರಿ, ಸೆ. ೧೯: ಇಂಡಿಯನ್ ಸೊಸೈಟಿ ಫಾರ್ ಸ್ಪೆöÊಸಸ್, ಕೋಜಿಕೋಡ್ ಹಾಗೂ ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಕೋಜಿಕೋಡ್ ಸಹಯೋಗದಲ್ಲಿ “ಸುಸ್ಥಿರ ಸಂಬಾರ ಬೆಳೆಗಳ ಉತ್ಪಾದನೆಗೆ ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳು” ಕುರಿತು ರೈತರ ವಿಚಾರ ಸಂಕಿರಣವು ಗುರುವಾರ ಅಪ್ಪಂಗಳದ ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಿತು.

ಕೊಡಗು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಅಶೋಕ್ ಎಸ್. ಆಲೂರ್ ಅವರು ಭಾರತೀಯ ಸಂಬಾರ ಬೆಳೆಗಳ ಜಾಗತಿಕ ಮನ್ನಣೆಯನ್ನು ಹೆಚ್ಚಿಸಲು ಮೌಲ್ಯವರ್ಧನೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.

ಕೋಜಿಕೊಡ್ ಐಸಿಎಆರ್-ಐಐಎಸ್‌ಆರ್ ನಿರ್ದೇಶಕ ಡಾ.ಆರ್. ದಿನೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಸ್ಥಿರ ಸಂಬಾರ ಬೆಳೆಗಳ ಉತ್ಪಾದನೆಗೆ ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

ಕೋಜಿಕೋಡ್ ಇಂಡಿಯನ್ ಸೊಸೈಟಿ ಫಾರ್ ಸ್ಪೆöÊಸಸ್, ಅಧ್ಯಕ್ಷ ಡಾ. ಕಂಡಿಯನ್ನನ್ ಅವರು ಸೊಸೈಟಿಯ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಐಸಿಎಆರ್-ಐಐಎಸ್‌ಆರ್ ಪ್ರಾದೇಶಿಕ ಕೇಂದ್ರದ ನಿವೃತ್ತ ಮುಖ್ಯಸ್ಥ ಡಾ.ಎಂ.ಎನ್. ವೇಣುಗೋಪಾಲ್ ಅವರು ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ತಮ್ಮ ಸಂಶೋಧನ ಅನುಭವ ಹಂಚಿಕೊAಡರು.

ಈ ಕಾಂiÀiðಕ್ರಮದಲ್ಲಿ ಕೇಂದ್ರಿಯ ತೋಟಗಾರಿಕ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿ, ಸೈಸಸ್ ಬೋರ್ಡ್, ಕಾಫಿ ಬೋರ್ಡ್, ಕೆವಿಕೆ, ಗೋಣಿಕೊಪ್ಪಲು, ಟಾಟಾ ಕಾಫಿ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿಯ ಸಿಬ್ಬಂದಿ ಭಾಗವಹಿಸಿದ್ದರು. ಅಪ್ಪಂಗಳದ ಐಸಿಎಆರ್-ಐಐಎಸ್‌ಆರ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಎಸ್.ಜೆ. ಅಂಕೇಗೌಡ ಸ್ವಾಗತಿಸಿದರು ಹಾಗೂ ಡಾ.ಹೊನ್ನಪ್ಪ ಆಸಂಗಿ ವಂದಿಸಿದರು.

ಈ ಸಂದರ್ಭದಲ್ಲಿ ತರಬೇತಿ ಕಾರ್ಯಾಗಾರದ ಉಪನ್ಯಾಸಗಳ ಇ-ಕೈಪಿಡಿ ಹಾಗೂ ಇಂಡಿಯನ್ ಸೊಸೈಟಿ ಫಾರ್ ಸ್ಪೆöÊಸಸ್‌ನ ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಐಐಎಸ್‌ಆರ್- ಚಂದ್ರ ಕಾಳುಮೆಣಸಿನ ಹೊಸ ತಳಿ ಪರಿಚಯಿಸಲಾಯಿತು.

ವಿಚಾರ ಸಂಕಿರಣದಲ್ಲ್ಲಿ ಕಾಳುಮೆಣಸು, ಏಲಕ್ಕಿ ಮತ್ತು ಶುಂಠಿಯ ಆಧುನಿಕ ಉತ್ಪಾದನೆ ಮತ್ತು ತಂತ್ರಜ್ಞಾನಗಳ ಬಗ್ಗೆ ಒತ್ತು ನೀಡಲಾಯಿತು. ಸಂಬಾರ ಬೆಳೆಗಳ ಇಳುವರಿ ಮತ್ತು ಗುಣಮಟ್ಟವನ್ನು ವೃದ್ಧಿಸಲು ಸುಧಾರಿತ ತಳಿಗಳ ಪಾತ್ರ, ಸಂಬಾರ ಬೆಳೆಗಳ ಉತ್ಪಾದನೆಯಲ್ಲಿ ಕೃಷಿಕತೆ ಮತ್ತು ಶಾರೀರಿಕ ತಂತ್ರಜ್ಞಾನಗಳು, ಜೈವಿಕÀ ಒತ್ತಡಗಳು ಮತ್ತು ಅವುಗಳ ನಿರ್ವಹಣೆ ಬಗ್ಗೆ ಐಸಿಎಆರ್-ಐ.ಐ.ಎಸ್.ಆರ್. ಪ್ರಾದೇಶಿಕ ಕೇಂದ್ರ, ಅಪ್ಪಂಗಳದ ವಿಜ್ಞಾನಿಗಳಿಂದ ಮಾಹಿತಿ ನೀಡಲಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ ಐಸಿಎಆರ್-ಐಐಎಸ್‌ಆರ್ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳ ಪ್ರದರ್ಶನ ಮಳಿಗೆಯನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ೧೫೦ಕ್ಕೂ ಹೆಚ್ಚು ರೈತರು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಕೋಜಿಕೋಡ್ ಮತ್ತು ಕೊಡಗು ವಿಶ್ವವಿದ್ಯಾಲಯ, ಕುಶಾಲನಗರ ನಡುವೆ ಸಂಶೋಧನೆ, ಶಿಕ್ಷಣ ಮತ್ತು ತರಬೇತಿ ಸಹಯೋಗಕ್ಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.