ಮಡಿಕೇರಿ, ಸೆ. ೧೯: ಪ್ರಸಕ್ತ ಸಾಲಿನ ಪ್ರಥಮ ಡಿಇಎಲ್ಇಡಿ ಕೋರ್ಸುಗೆ ಸರ್ಕಾರಿ ಕೋಟಾದಡಿ ದಾಖಲಾಗಲು ತಾ. ೨೭ ರವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಸಂಬAಧವಾಗಿ ಆಸಕ್ತಿ ಹೊಂದಿದ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ಹಾಗೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು (ಸಾಮಾನ್ಯ ಅಭ್ಯರ್ಥಿಗಳು ಶೇ. ೫೦ ಹಾಗೂ ಪ.ಜಾತಿ, ಪ.ಪಂಗಡ ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ ಶೇ. ೪೫ ಅಂಕ ಪಡೆದಿರಬೇಕು). ಇತರೆ ಸೂಚನೆಗಳನ್ನು ವೆಬ್ಸೈಟ್ ತಿತಿತಿ.sಛಿhooeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಲ್ಲಿ ಮಾಹಿತಿಯನ್ನು ಕಡ್ಡಾಯವಾಗಿ ಓದಿಕೊಂಡು ಅರ್ಜಿಯನ್ನು ಕ್ರಮವಾಗಿ ಭರ್ತಿ ಮಾಡುವುದು. ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಗೆ ಸಲ್ಲಿಸುವುದು.
ಅರ್ಜಿಯನ್ನು ತಾ. ೨೭ ರ ಸಂಜೆ ೫.೩೦ ಗಂಟೆಯೊಳಗೆ ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ಬ್ಯಾಂಕ್ನಲ್ಲಿ ಡಿ.ಡಿ. ಮೂಲಕ ಪಾವತಿಸಲು ತಾ. ೨೭ ಕೊನೆಯ ದಿನ (ಸಾಮಾನ್ಯ ಅಭ್ಯರ್ಥಿಗೆ ಅರ್ಜಿ ಶುಲ್ಕ ರೂ. ೧೫೦, ದಾಖಲಾತಿ ಶುಲ್ಕ ರೂ. ೩೦೬೫, ಒಟ್ಟು ರೂ. ೩,೨೧೫, ಪ.ಜಾತಿ ಹಾಗೂ ಪ.ಪಂ. ರೂ. ೫೦), ಹೆಚ್ಚಿನ ಮಾಹಿತಿಗೆ ಡಯಟ್ ಕೂಡಿಗೆ ದೂ. ೦೮೨೭೬-೨೭೮೨೮೭, ೯೪೪೮೮೧೩೫೭೬, ೮೧೩೯೯೫೬೮೦೨ ನ್ನು ಸಂಪರ್ಕಿಸಬಹುದು ಎಂದು ಕೂಡಿಗೆ ಡಯಟ್ ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರು (ಅಭಿವೃದ್ಧಿ) ತಿಳಿಸಿದ್ದಾರೆ.