ಐಗೂರು, ಸೆ. ೧೯: ಜಿಲ್ಲೆಯಲ್ಲಿ ಹಲವಾರು ಗ್ರಾಮ ಪಂಚಾಯಿತಿಗಳು ತಮ್ಮ ಹತ್ತಿರದ ಸೌಲಭ್ಯವಿರುವ ಪಂಚಾಯತಿಗಳಿಗೆ ಸೇರ್ಪಡೆಗೊಂಡಿದ್ದರೂ, ಐಗೂರು ಪಂಚಾಯಿತಿಯ ಗಡಿಭಾಗದ ಮೂಲ ನಿವಾಸಿಗಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಕಿರುಗಂದೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಐಗೂರು ಗ್ರಾಮ ಪಂಚಾಯಿತಿಯ ಕೂಗಳತೆಯ ದೂರಕ್ಕೆ ಹೊಂದಿಕೊAಡಿರುವ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಸುಮಾರು ೩೦ ಕುಟುಂಬಗಳು ಮತ್ತು ಅದೇ ಭಾಗದ ಚೋರನಹೊಳೆಯ ಬದಿಯಲ್ಲಿ ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಿರುವ ೧೧ ಕುಟುಂಬಗಳು ಸೇರಿ ಒಟ್ಟು ೪೧ ಕುಟುಂಬಗಳು ಹಕ್ಕುಪತ್ರ ಮತ್ತು ಆರ್ಟಿಸಿಯನ್ನು ಹೊಂದಿ ಸುಮಾರು ೨೦ ವರ್ಷದಿಂದ ವಾಸವಾಗಿದ್ದಾರೆ. ಇಲ್ಲಿಯ ಮೂಲ ನಿವಾಸಿಗಳು ೮ ಕಿಲೋಮೀಟರ್ ದೂರದ ಕಿರುಗಂದೂರು ಗ್ರಾಮ ಪಂಚಾಯಿತಿಗೆ ಸೇರಿದವರಾಗಿದ್ದರೂ, ಇವರಿಗೆ ಐಗೂರು ಗ್ರಾಮ ಪಂಚಾಯಿತಿ ಕೇವಲ ೧ ಕಿಲೋ ಮೀಟರ್ ದೂರದಲ್ಲಿದೆ.
೧೯೯೨-೯೩ ರ ಸಾಲಿನಲ್ಲಿ ಮಂಡಲ ಪಂಚಾಯಿತಿಯು ಗ್ರಾಮ ಪಂಚಾಯಿತಿಯಾಗಿ ಬದಲಾದಾಗ ಈ ಭಾಗದ ಜನರು ಐಗೂರು ಪಂಚಾಯಿತಿಯ ಮತದಾರರಾಗಿದ್ದರು. ನಂತರದ ದಿನಗಳಲ್ಲಿ ರಾಜಕೀಯವಾಗಿ ಈ ಭಾಗದ ಮತದಾರರನ್ನು ಕಿರುಗಂದೂರು ಪಂಚಾಯತಿಗೆ ಸೇರ್ಪಡೆಗೊಳಿಸಲಾಯಿತು. ೨೦೧೬ರಲ್ಲಿ ಈ ಭಾಗದ ಜನರಿಗೆ ಐಗೂರು ಗ್ರಾಮ ಪಂಚಾಯಿತಿಯಿAದಲೇ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಇಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳಾದ ಪಡಿತರ ಅಕ್ಕಿ, ಸಹಕಾರ ಸಂಘ, ರಾಷ್ಟಿçÃಕೃತ ಬ್ಯಾಂಕ್, ಶಾಲಾ ಕಾಲೇಜು, ಅಂಚೆ ಕಛೇರಿ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ ಮತ್ತು ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಮತ್ತು ಸುಂಟಿಕೊಪ್ಪ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆಯು ಕೂಗಳತೆ ದೂರದ ಐಗೂರಿಗೆ ಹೊಂದಿಕೊAಡAತ್ತಿದ್ದು ಬರೀ ಕಂದಾಯ ಪಾವತಿಸಲು ಎಂಟು ಕಿಲೋಮೀಟರ್ ದೂರದ ಕಿರುಗಂದೂರು ಗ್ರಾಮ ಪಂಚಾಯಿತಿಗೆ ಹೋಗಿಬರುವುದು ಕಷ್ಟದ ಕೆಲಸವಾಗಿದೆ.
ಕಿರುಗಂದೂರಿಗೆ ಹೋಗಿ ಬರುವ ರಸ್ತೆಯು ಬೆಟ್ಟ ಗುಡ್ಡಗಳಿಂದ ಕೂಡಿದ್ದು ವಾಹನ ಚಾಲನೆಗೆ ಯೋಗ್ಯವಾಗಿರುವುದಿಲ್ಲ. ಜೊತೆಗೆ ಕೂಲಿ ಕಾರ್ಮಿಕರೇ ಅಧಿಕವಾಗಿರುವ ಇಲ್ಲಿ ತಮ್ಮ ಒಂದು ದಿನದ ವೇತನದ ಕೆಲಸವನ್ನು ಸ್ಥಗಿತಗೊಳಿಸಿ, ಆಟೋರಿಕ್ಷಾಕ್ಕೆ ಬಾಡಿಗೆ ಹಣತೆತ್ತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆಯ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಸಂಪರ್ಕಿಸಿ ಕಿರುಗಂದೂರು ಗ್ರಾಮ ಪಂಚಾಯಿತಿಗೆ ಸೇರಿದ ಪ್ರದೇಶವನ್ನು ಕೂಗಳತೆಯ ದೂರದ ಎಲ್ಲಾ ಸೌಲಭ್ಯಗಳಿರುವ ಐಗೂರು ಗ್ರಾಮ ಪಂಚಾಯಿತಿ ಪ್ರದೇಶಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ಕೆ ಮುಂದಾಗಬೇಕೆAಬುದು ಸ್ಥಳೀಯರ ಆಗ್ರಹ. - ಸುಕುಮಾರ, ಐಗೂರು