ಮಡಿಕೇರಿ, ಸೆ. ೧೯: ಇತ್ತೀಚೆಗೆ ನಾಪೋಕ್ಲು ಸಮೀಪ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿ ಮುತ್ತಾರ್ಮುಡಿಯ ಮಹೇಶ್ ಹಾಗೂ ಅವರ ಪುತ್ರಿ ಗಾಯಗೊಂಡ ಘಟನೆ ನಡೆದಿತ್ತು.

ಈ ಇಬ್ಬರೂ ಈಗ ಮೈಸೂರಿನ ಖಾಸಗಿ ಆಸ್ಪತ್ರೆಯ ಐ.ಸಿ.ಯು.ನಲ್ಲಿ ದಾಖಲಾಗಿದ್ದು, ಈಗಾಗಲೇ ಮಗುವಿನ ಶಸ್ತçಚಿಕಿತ್ಸೆ ಮುಗಿದಿದೆ. ಚಿಕಿತ್ಸಾ ವೆಚ್ಚ ರೂ. ೨,೪೫,೦೦೦ ಗಳಷ್ಟಾಗಿದ್ದು, ಸ್ವಲ್ಪ ಪ್ರಮಾಣದ ಮೊತ್ತವನ್ನು ಅಂಕೂರ್ ಶಾಲೆಯು ಭರಿಸಿದೆ. ಮತ್ತೆ ಮಹೇಶ್ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಅನಿವಾರ್ಯವಾಗಿದ್ದು, ಅಂದಾಜು ನಾಲ್ಕು ಲಕ್ಷ ಖರ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಬಡ ಕುಟುಂಬವಾಗಿರುವ ಇವರಿಗೆ ಈ ಮೊತ್ತ ಭರಿಸುವ ಶಕ್ತಿ ಇಲ್ಲ. ಸಾರ್ವಜನಿಕರು ತಮ್ಮ ಕೈಯ್ಯಲಾದ ಧನ ಸಹಾಯವನ್ನು ಮಹೇಶ್ ಟಿ. ಪಿ. ಅವರ ೯೪೮೦೨೭೦೬೨೧ ಸಂಖ್ಯೆಗೆ ಗೂಗಲ್ ಪೇ ಮಾಡಿ ಸಹಕರಿಸುವಂತೆ ಕೋರಿದೆ.