ಮಡಿಕೇರಿ, ಸೆ. ೧೯: ಪಶ್ಚಿಮ ಬಂಗಾಳದ ಅಸನ್ ಸೋಲ್‌ನಲ್ಲಿ ನಡೆದ ೩೨ನೇ ಆಲ್ ಇಂಡಿಯಾ ಜಿ.ವಿ ಮೌಲಾಂಕರ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ೧೦ ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಗರದ ಕೊಡಗು ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿನಿ ಕಾನಡ್ಕ ಧನ್ವಿ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈಕೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಎನ್.ಆರ್ ವಿಭಾಗದಲ್ಲಿ ಭಾಗವಹಿಸಿ ೧೬ ವರ್ಷದೊಳಗಿನ ಸಬ್ ಯೂತ್ ವಿಭಾಗದಲ್ಲಿ ೪ನೇ ಸ್ಥಾನ ಮತ್ತು ೧೯ ವರ್ಷದೊಳಗಿನ ಯೂತ್ ವಿಭಾಗದಲ್ಲಿ ೫ನೇ ಸ್ಥಾನ ಗಳಿಸಿದ್ದರು. ಧನ್ವಿ ಮರಗೋಡಿನ ಕೃಷಿಕÀ ಕಾನಡ್ಕ ಹನೀಶ್ ಹಾಗೂ ಆಶಾ ದಂಪತಿಯ ಪುತ್ರಿ.