ಭಾಗಮಂಡಲ, ಸೆ. ೧೯: ಪಾಪನಾಶಿನಿ ಜೀವನದಿ ಮಾತೆ ಕಾವೇರಿಯ ಪವಿತ್ರ ತೀರ್ಥೋದ್ಭವ ಈ ಬಾರಿ ಅಕ್ಟೋಬರ್ ೧೮ ರ ಬೆಳಗ್ಗಿನ ಜಾವ ೧ ಗಂಟೆ ೨೭ ನಿಮಿಷಕ್ಕೆ (ಅ.೧೭ರ ಮಧ್ಯರಾತ್ರಿ ಕಳೆದು) ಜರುಗಲಿದೆ. ೧.೨೭ ಗಂಟೆಗೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತಾಯಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರುಶನ ನೀಡಲಿದ್ದಾಳೆ.

ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ತಾ.೨೭ ರಂದು ಬೆಳಿಗ್ಗೆ ೯.೨೯ ಗಂಟೆಗೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕಲಾಗುತ್ತದೆ. ಅ.೫ ರಂದು ಬೆಳಿಗ್ಗೆ ೮.೩೧ ಕ್ಕೆ ತುಲಾ ಲಗ್ನದಲ್ಲಿ ಆಙ್ಞ ಮುಹೂರ್ತ, ಅ.೧೫ ರಂದು ಬೆಳಿಗ್ಗೆ ೧೧.೪೫ ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು; ಸಂಜೆ ೪.೫ಕ್ಕೆ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿ ಇಡಲಾಗುತ್ತದೆ.

(ಮೊದಲ ಪುಟದಿಂದ) ತುಲಾ ಸಂಕ್ರಮಣದ ಆಗಮನದ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ತಲಕಾವೇರಿಯ ನಾಲ್ಕು ರಾಜಗೋಪುರಗಳ ಸ್ವಚ್ಛತಾ ಕಾರ್ಯ ಆರಂಭಗೊAಡಿದ್ದು ಸುಣ್ಣಬಣ್ಣ ಬಳಿದು ಅಲಂಕರಿಸುವ ಕಾರ್ಯ ನಡೆಯುತ್ತಿದೆ. ತಲಕಾವೇರಿಯಲ್ಲಿ ತಿಂಗಕ್ಕೊರ್ ಮೊಟ್ ತಂಡದಿAದ ಮೊನ್ನೆ ದಿನ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಭಾಗಮಂಡಲದ ಆಟೋ ಚಾಲಕರ ಸಂಘದ ಸದಸ್ಯರಿಂದ ಭಾಗಮಂಡಲ ದಿಂದ ತಲಕಾವೇರಿವರೆಗೆ ತಾ. ೨೬ರಂದು ಸ್ವಚ್ಛತಾ ಕಾರ್ಯ ನಡೆಯಲಿದೆ. ತುಲಾ ಸಂಕ್ರಮಣದ ಸಿದ್ಧತೆಗಳ ಬಗ್ಗೆ ತಲಕಾವೇರಿ ಭಾಗಮಂಡಲ ದೇವಾಲಯ ಸಮಿತಿಯ ಕಾರ್ಯ ನಿರ್ವಹಣಾದಿ üಕಾರಿ ಎಂ.ಜಿ ಚಂದ್ರಶೇಖರ್ ಆಗಮಿಸಿ ಪರಿಶೀಲನೆ ನಡೆಸಿದರು. ಪಾರುಪತ್ಯೆಗಾರ ಪೊನ್ನಣ್ಣ ಹಾಗೂ ಸಿಬ್ಬಂದಿ ಹಾಜರಿದ್ದರು.

-ಕುಯ್ಯಮುಡಿ ಸುನಿಲ್