ಮಡಿಕೇರಿ, ಸೆ. ೧೯ : ಆದಿ ಪೂಜಿತ, ವಿಘ್ನ ನಿವಾರಕ ಶ್ರೀ ವಿನಾಯಕನ ಆರಾಧನೆಯನ್ನು ನಾಡಿನಾದ್ಯಂತ ಭಕ್ತರು ಭಕ್ತಿ ಭಾವದೊಂದಿಗೆ ಸಡಗರ ಸಂಭ್ರಮದಿAದ ಆಚರಿಸಿದರು. ನಿನ್ನೆ ಮಧ್ಯಾಹ್ನ ಚತುರ್ಥಿ ಆರಂಭಗೊAಡ ಬಳಿಕ ಕೆಲವೆಡೆಗಳಲ್ಲಿ ಗೌರಿ-ಗಣೇಶ ಉತ್ಸವವನ್ನು ಆಚರಿಸಿದರೆ, ಇನ್ನುಳಿದಂತೆ ಎಲ್ಲ್ಲಾ ಕಡೆಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಆಚರಿಸಲಾಯಿತು. ಗಣಪತಿ ದೇವಾಲಯಗಳು ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಹೋಮ ಹವನಾದಿಗಳು ನೆರವೇರಿದವು. ಮನೆ ಮನೆಗಳಲ್ಲೂ ಗಣೇಶನನ್ನು ಪೂಜಿಸಿದರೆ, ಸಂಘ ಸಂಸ್ಥೆಗಳ ವತಿಯಿಂದ ಸಾರ್ವಜನಿಕವಾಗಿ ಗೌರಿ-ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಕೆಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಉತ್ಸವ ಮೂರ್ತಿಗಳನ್ನು ಇಂದೇ ವಿಸರ್ಜನೆ ಮಾಡಿದರೆ, ಇನ್ನೂ ಹಲವೆಡೆಗಳಲ್ಲಿನ ಮೂರ್ತಿಗಳನ್ನು ವಿವಿಧ ದಿವಸಗಳಲ್ಲಿ ವಿಸರ್ಜನೆ ಮಾಡಲಾಗುವದು.

ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿಯ ಕೋಟೆ ಆವರಣದಲ್ಲಿರುವ ಕೋಟೆ ಶ್ರಿ ಮಹಾಗಣಪತಿ ದೇವಾಲಯದಲ್ಲಿ ಗಣೇಶೋತ್ಸವ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಧಾರ್ಮಿಕ ದತ್ತಿ ಇಲಖೆ ವತಿಯಿಂದ ಹೂವಿನ ಅಲಂಕಾರದೊAದಿಗೆ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಣ್ಣುಕಾಯಿ, ಅರ್ಚನೆಯೊಂದಿಗೆ ವಿಶೇಷ ಪೂಜೆ ನೆರವೇರಿತು. ಭಕ್ತರು ಈಡುಗಾಯಿ ಒಡೆಯುವದರೊಂದಿಗೆ ಹರಕೆ ಸಮರ್ಪಿಸಿದರು. ಮಳೆ ಬಿಡುವು ನೀಡಿದ್ದರಿಂದ ಭಕ್ತರು ಯಾವದೇ ತೊಂದರೆ ಇಲ್ಲದೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.

ವಿಜಯ ವಿನಾಯಕ ದೇವಾಲಯ

ಇಲ್ಲಿನ ವಿಜಯನಗರದಲ್ಲಿರುವ ಶ್ರೀ ವಿಜಯವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ ಪ್ರಯುಕ್ತ ವಿಶೇಷ ಪೂಜಾದಿ ಸೇವೆಗಳು ನೆರವೇರಿದವು.

ಉತ್ಸವದ ಅಂಗವಾಗಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

(ಮೊದಲ ಪುಟದಿಂದ) ಸಾಮೂಹಿಕ ಗಣಹೋಮ ನಡೆದು ಮಧ್ಯಾಹ್ನ ಪೂರ್ಣಾಹುತಿಯೊಂದಿಗೆ ಮಹಾ ಮಂಗಳಾರತಿ ನೆರವೇರಿತು. ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಣೆ ಮಾಡಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಹೋಮ, ಪೂಜಾದಿ ಸೇವೆಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಇನ್ನುಳಿದಂತೆ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಓಂಕಾರೇಶ್ವರ ದೇವಾಲಯ ಸೇರಿದಂತೆ ಶ್ರೀ ವಿಜಯ ವಿನಾಯಕ ದೇವಾಲಯ, ದೃಷ್ಠಿ ಗಣಪತಿ, ಪ್ರಸನ್ನ ಗಣಪತಿ, ವಿದ್ಯಾಗಣಪತಿ ದೇವಾಲಯಗಳು ಹಾಗೂ ಇತರ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ನಗರದ ಖಾಸಗಿ ಬಸ್ ನಿಲ್ದಾಣ, ಶಾಂತಿನಿಕೇತನ ಯುವಕ ಸಂಘ, ಓಂಕಾರ್ ಯುವ ವೇದಿಕೆ, ಅಶೋಕಪುರ, ಕಾನ್ವೆಂಟ್ ಜಂಕ್ಷನ್ ವಿನಾಯಕ ಸೇವಾ ಸಮಿತಿ, ಐಟಿಐ ಜಂಕ್ಷನ್, ವಿದ್ಯಾನಗರ ಸೇರಿದಂತೆ ವಿವಿಧೆಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ವೀರಾಜಪೇಟೆ

ವೀರಾಜಪೇಟೆ: ವೀರಾಜಪೇಟೆ ನಗರ ವ್ಯಾಪ್ತಿಯಲ್ಲಿ ಗೌರಿ-ಗಣೇಶÀ ಪ್ರತಿಷ್ಠಾಪನೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಶ್ರೀ ವiಹಾಗಣಪತಿ ದೇವಾಲಯದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ. ಬಳಿಕ ಸಿಡಿ ಮದ್ದು ಸಿಡಿಸಿ ಉಳಿದ ಸಮಿತಿಗಳಿಗೆ ಮಾಹಿತಿ ನೀಡಲಾಯಿತು. ನಂತರ ಇತರ ಸ್ಥಳಗಳಲ್ಲಿ ಗಜಾನನ ಮೂರ್ತಿಯ ಪ್ರತಿಷ್ಠಾಪನೆ ಶಾಶ್ತೊçÃಕ್ತವಾಗಿ ನೆರವೇರಿತು.

ಪಟ್ಟಣದ ಪ್ರಮುಖ ಗೌರಿ-ಗಣೇಶೋತ್ಸವ ಸಮಿತಿಗಳಾದ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ, ಶ್ರೀ ವಿನಾಯಕ ಸೇವಾ ಸಮಿತಿ ಪಂಜರ್‌ಪೇಟೆ, ಶ್ರೀ ಮಹಾಗಣಪತಿ ಸೇವಾ ಸಂಘ ಗಣಪತಿ ಬೀದಿ, ಶ್ರೀ ಬಸವೇಶ್ವರ ದೇವಾಲಯ, ವiಹಾ ಗಣಪತಿ ದೇವಾಲಯ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ, ವಿನಾಯಕ ಭಕ್ತ ಮಂಡಳಿ, ಅಂಗಾಳ ಪರಮೇಶ್ವರಿ ದೇವಸ್ಥಾನ, ನೇತಾಜಿ ಗಣೇಶೋತ್ಸವ ಸಮಿತಿ ನೆಹರುನಗರ, ವಿಜಯ ವಿನಾಯಕ ಉತ್ಸವ ಸಮಿತಿ ದಖ್ಖನಿ ಮೊಹಲ್ಲ, ಕಣ್ಮಣಿ ಯುವಕ ಸಂಘÀ ಮಲೆತಿರಿಕೆ ಬೆಟ್ಟ, ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ, ಶ್ರೀ ಗಣಪತಿ ಸೇವಾ ಸಮಿತಿ ಗಾಂಧಿನಗರ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಕೆ.ಬೋಯಿಕೇರಿ, ಜಲದರ್ಶಿನಿ ಗಣೇಶೋತ್ಸವ ಸಮಿತಿ ಚಿಕ್ಕಪೇಟೆ, ಗಣಪತಿ ಸೇವಾ ಸಮಿತಿ ಪೌರಸೇವಾ ನೌಕರರ ಸಂಘ ಪಟ್ಟಣ ಪಂಚಾಯಿತಿ, ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ಹರಿಕೆರೆ ಸುಣ್ಣದ ಬೀದಿ, ಶ್ರೀ ವಿನಾಯಕ ಯುವಕರ ಸಮಿತಿ ಕುಕ್ಲೂರು, ಶ್ರೀ ಬಾಲ ಆಂಜನೇಯ ಗಣಪತಿ ಸೇವಾ ಸಮಿತಿ ಅಪ್ಪಯ್ಯ ಸ್ವಾಮಿ ರಸ್ತೆ, ಶ್ರೀ ಗೌರಿಕೆರೆ ಸೇವಾ ಸಮಿತಿ ಹಾಗೂ ವಿನಾಯಕ ಸೇವಾ ಸಮಿತಿ ಶಿವಕೇರಿ ಸೇರಿದಂತೆ ನಗರದ ೨೨ ಸ್ಥಳಗಳಲ್ಲಿ ವಿಘ್ನವಿನಾಯಕನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ನಗರದ ಆಯ್ದ ಸಮಿತಿಗಳ ವತಿಯಿಂದ ೧೧ ದಿನಗಳ ಕಾಲ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಸಮಿತಿಗಳ ಉತ್ಸವ ಮೂರ್ತಿಗಳನ್ನು ತಾ. ೨೮ ರಂದು ರಾತ್ರಿ ಅನಂತಪದ್ಮನಾಭ ವ್ರತದಂದು ಮೆರವಣಿಗೆ ನಡೆಸಿ ತಾ. ೨೭ರ ಮುಂಜಾನೆ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.

ಕುಶಾಲನಗರ

ಗಣೇಶ ಚತುರ್ಥಿ ಪ್ರಯುಕ್ತ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಎರಡು ದಿನಗಳ ಅವಧಿಯಲ್ಲಿ ಒಟ್ಟು ೨೬ ಕಡೆ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಗೌರಿ ಗಣೇಶ ಹಬ್ಬದ ಅಂಗವಾಗಿ ಸೋಮವಾರ ಒಟ್ಟು ೧೦ ಕಡೆ ಪ್ರತಿಷ್ಠಾಪನೆ ನಡೆದು ಪೂಜಾ ಕಾರ್ಯಕ್ರಮಗಳು ನಡೆದವು. ಉಳಿದಂತೆ ೧೬ ಕಡೆಗಳಲ್ಲಿ ಮಂಗಳವಾರ ಪ್ರತಿಷ್ಠಾಪನ ಕಾರ್ಯಕ್ರಮಗಳು ಜರುಗಿದವು.

ಹತ್ತು ಕಡೆ ಪ್ರತಿಷ್ಠಾಪನೆಗೊಂಡ ವಿಘ್ನ ವಿನಾಶಕನ ಮೂರ್ತಿಗಳಿಗೆ ಪೂಜಾ ಕಾರ್ಯಕ್ರಮಗಳು, ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತಪಣೆಯ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ಗಣಪತಿ ದೇವಾಲಯದಲ್ಲಿ ಎರಡು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ದೇವಾಲಯದ ಪ್ರಧಾನ ಅರ್ಚಕರಾದ ನಾಗೇಂದ್ರಬಾಬು ಹಾಗೂ ರಾಘವೇಂದ್ರ ಭಟ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಬೆಳಗ್ಗಿನಿಂದ ಸಂಜೆವರೆಗೆ ದೇವಾಲಯಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು. ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಗಳನ್ನು ಸಂಜೆ ಮೆರವಣಿಗೆ ಮೂಲಕ ತೆರಳಿ ವಿಸರ್ಜಿಸಲಾಯಿತು.

ಕುಶಾಲನಗರ ಸೂರ್ಯ ವಿನಾಯಕ ಗೆಳೆಯರ ಬಳಗ ವತಿಯಿಂದ ಪಟ್ಟಣದ ಗಣಪತಿ ದೇವಾಲಯ ಬಳಿ ಪ್ರತಿಷ್ಠಾಪಿಸಿದ ಗಣಪತಿಗೆ ವಿಶೇಷ ಪೂಜಾ ಕಾರ್ಯಗಳ ನಂತರ ಸಂಜೆ ವಾದ್ಯಗೋಷ್ಠಿ ಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ವಿಸರ್ಜನೆ ನಡೆಯಿತು.

ಕುಶಾಲನಗರ ಹಳೆ ಮಾರುಕಟ್ಟೆ ರಸ್ತೆಯ ನಾಗದೇವತ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪನೆಗೊಂಡ ಗಣಪತಿ ಮೂರ್ತಿಗೆ ಅರ್ಚಕರಾದ ಶ್ರೀಧರ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

ಸಮಿತಿಯ ಅಧ್ಯಕ್ಷ ಮಣಿಕಂಠ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ಪೂಜೆ ಸಲ್ಲಿಸಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಗಣೇಶ ಚತುರ್ಥಿ ಕಾರ್ಯಕ್ರಮ ನಡೆಯಲಿದೆ.

ಗೌರಿ ಗಣೇಶ ಹಬ್ಬದ ಅಂಗವಾಗಿ ಕುಶಾಲನಗರ ಗಣಪತಿ ದೇವಾಲಯ, ಜನತಾ ಕಾಲೋನಿ ಗೌರಿ ಗಣೇಶ ದೇವಾಲಯ ಸೇರಿದಂತೆ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.ಅದ್ಧೂರಿಯಾಗಿ ಗಣೇಶ ಚತುರ್ಥಿ ಕಾರ್ಯಕ್ರಮ ನಡೆಯಲಿದೆ.

ಗೌರಿ ಗಣೇಶ ಹಬ್ಬದ ಅಂಗವಾಗಿ ಕುಶಾಲನಗರ ಗಣಪತಿ ದೇವಾಲಯ, ಜನತಾ ಕಾಲೋನಿ ಗೌರಿ ಗಣೇಶ ದೇವಾಲಯ ಸೇರಿದಂತೆ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.ಸೋಮವಾರಪೇಟೆ : ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗೌರಿ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮನೆಗಳಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಕೆಲವು ಕಡೆಗಳಲ್ಲಿ ಮಧ್ಯಾಹ್ನ ಅನ್ನದಾನ ನಡೆಯಿತು.

ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ೮೬ ಕಡೆಗಳಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ತಿಳಿಸಿದ್ದಾರೆ. ಕೆಲವು ಕಡೆಗಳಲ್ಲಿ ಇಂದಿನಿAದಲೇ ಉತ್ಸವ ಮೂರ್ತಿಗಳ ವಿಸರ್ಜನಾ ಮಹೋತ್ಸವ ಆಯೋಜನೆಗೊಂಡಿದ್ದು, ಮುಂದಿನ ತಿಂಗಳ ೧೫ರವರೆಗೆ ಎಲ್ಲಾ ಭಾಗಗಳಲ್ಲಿ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಪೂರ್ಣಗೊಳ್ಳಲಿವೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ದಾನಿಗಳೇ ಸದಸ್ಯರಾಗಿರುವ ಶ್ರೀ ಸಾರ್ವಜನಿಕ ಗೌರಿ ಗಣಪತಿ ಉತ್ಸವ ಸಮಿತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ನೂರಾರು ಮಂದಿ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ಅಂತೆಯೇ ಪಟ್ಟಣದ ವಿವಿಧ ದೇವಾಲಯಗಳು, ಶ್ರೀ ಗಣಪತಿ ಸೇವಾ ಸಮಿತಿ ಕಕ್ಕೆಹೊಳೆ, ಭಾರತೀಯ ಯುವಕ ಸಂಘ ಆಲೇಕಟ್ಟೆ ರಸ್ತೆ, ಗೌರಿ ಗಣಪತಿ ಉತ್ಸವ ಸಮಿತಿ ಮಾನಸ ಹಾಲ್ ಹಿಂಭಾಗ, ಹಾನಗಲ್ಲು, ಯಡೂರು, ಬೇಳೂರು, ಕಿಬ್ಬೆಟ್ಟ, ಕಲ್ಕಂದೂರು, ಶಾಂತಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಗೌಡಳ್ಳಿ, ಅಬ್ಬೂರುಕಟ್ಟೆ, ತಾಕೇರಿ, ಕಿರಗಂದೂರು, ಬೆಟ್ಟದಳ್ಳಿ, ಹರಗ, ಐಗೂರು, ಮಾದಾಪುರ ಸೇರಿದಂತೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ದಾನಿಗಳೇ ಸದಸ್ಯರಾಗಿರುವ ಶ್ರೀ ಸಾರ್ವಜನಿಕ ಗೌರಿ ಗಣಪತಿ ಉತ್ಸವ ಸಮಿತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ನೂರಾರು ಮಂದಿ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ಅಂತೆಯೇ ಪಟ್ಟಣದ ವಿವಿಧ ದೇವಾಲಯಗಳು, ಶ್ರೀ ಗಣಪತಿ ಸೇವಾ ಸಮಿತಿ ಕಕ್ಕೆಹೊಳೆ, ಭಾರತೀಯ ಯುವಕ ಸಂಘ ಆಲೇಕಟ್ಟೆ ರಸ್ತೆ, ಗೌರಿ ಗಣಪತಿ ಉತ್ಸವ ಸಮಿತಿ ಮಾನಸ ಹಾಲ್ ಹಿಂಭಾಗ, ಹಾನಗಲ್ಲು, ಯಡೂರು, ಬೇಳೂರು, ಕಿಬ್ಬೆಟ್ಟ, ಕಲ್ಕಂದೂರು, ಶಾಂತಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಗೌಡಳ್ಳಿ, ಅಬ್ಬೂರುಕಟ್ಟೆ, ತಾಕೇರಿ, ಕಿರಗಂದೂರು, ಬೆಟ್ಟದಳ್ಳಿ, ಹರಗ, ಐಗೂರು, ಮಾದಾಪುರ ಸೇರಿದಂತೆ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ೮೬ ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ೮೬ ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಪೊನ್ನಂಪೇಟೆ : ಪೊನ್ನಂಪೇಟೆ ಪಟ್ಟಣದ ೭ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಬೆಳಿಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಗಣಪತಿ ಹೋಮದ ನಂತರ ಎಲ್ಲಾ ಗಣಪತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಇಲ್ಲಿನ ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಎಂ.ಜಿ.ನಗರದ ಯುವ ಶಕ್ತಿ ಯುವಕ ಸಂಘ, ಮುಖ್ಯ ರಸ್ತೆಯಲ್ಲಿರುವ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಶಿವ ಕಾಲೋನಿಯ ಶಿವ ಯುವಕ ಸಂಘ, ನೆಹರು ನಗರ ವಿನಾಯಕ ಯುವಕರ ಸಂಘಗಳು ತಮ್ಮ ತಮ್ಮ ಬಡಾವಣೆಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದವು. ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿಸಲಾಯಿತು. ತಾ.೨೭ ರಂದು ರಾತ್ರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಪೊನ್ನಂಪೇಟೆಯ ಗೌರಿ ಕೆರೆಯಲ್ಲಿ ತಾ. ೨೮ ರ ಬೆಳಗ್ಗಿನ ಜಾವ ಸಾಮೂಹಿಕವಾಗಿ ಗೌರಿ -ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಮಾಡಲಾಗುವುದು. ಮಡಿಕೇರಿ : ಗೌರಿ ಗಣೇಶೋತ್ಸವದ ಪ್ರಯುಕ್ತ ಶ್ರೀ ಜ್ಯೋತಿ ಯುವಕ ಸಂಘದ ವತಿಯಿಂದ ಮಡಿಕೇರಿ ಕೋದಂಡರಾಮ ದೇವಾಲಯದಲ್ಲಿ ಗಣಪತಿ ಹೋಮ ನೆರವೇರಿತು. ಗಣಪತಿ ಹೋಮ ಹಾಗೂ ವಿಶೇಷ ಪೂಜೆಯನ್ನು ಅರ್ಚಕ ಚಂದ್ರಕಾAತ್ ಭಟ್ ನೆರವೇರಿಸಿದರು. ಸಂಜೆ ಪ್ರಸಾದ ವಿನಿಯೋಗ ಬಳಿಕ ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಯ ವಿಸರ್ಜನೆ ನಡೆಯಿತು.