ಮಡಿಕೇರಿ, ಸೆ. ೧೯: ೧೦೨ ವರ್ಷಗಳನ್ನು ಪೂರೈಸಿ ೧೦೩ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹತ್ತು ಹಲವಾರು ಯೋಜನೆಗಳು ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ಪೂರಕವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರು ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕ್‌ನ ವಾರ್ಷಿಕ ಮಹಾಸಭೆ ತಾ.೨೦ ರಂದು (ಇಂದು) ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ನಡೆಯಲಿರುವುದಾಗಿ ತಿಳಿಸಿದರು. ಈ ಬಾರಿ ಮಾರ್ಚ್ ೩೧ ಕ್ಕೆ ಅಂತ್ಯಗೊAಡAತೆ ಬ್ಯಾಂಕ್ ರೂ.೧೧.೦೪ ಕೋಟಿಯಷ್ಟು ಲಾಭ ಗಳಿಸಿದೆ.

ಆರ್.ಬಿ.ಐ, ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿAದ ನೀಡಲ್ಪಡುವ ಆರ್ಥಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆ ಯುತ್ತಿದ್ದು, ಇಂದು ರಾಜ್ಯದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಪೈಕಿ ೫ನೇ ಪ್ರಮುಖ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಎಂದು ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ೨೦೨೨-೨೩ನೇ ಸಾಲಿಗೆ ಜಿಲ್ಲೆಯಲ್ಲಿನ ವಿವಿಧ ೨೪ ಬ್ಯಾಂಕುಗಳ ಪೈಕಿ ಠೇವಣಾತಿ ಸಂಗ್ರಹಣೆಯಲ್ಲಿ ಶೇ. ೨೨.೯೮ರ ಷೇರಿನೊಂದಿಗೆ ಹಾಗೂ ಸಾಲ ನೀಡುವಿಕೆಯಲ್ಲಿ ಶೇ. ೨೩.೬೯ರ ಷೇರಿನೊಂದಿಗೆ ಪ್ರಥಮ ಸ್ಥಾನ ಹೊಂದಿದ್ದು,

(ಮೊದಲ ಪುಟದಿಂದ) ಜಿಲ್ಲೆಯ ಆದ್ಯತಾ ವಲಯದ ಸಾಲ ನೀಡುವಿಕೆಯಲ್ಲಿ ಶೇ. ೧೮.೭೮ರ ಷೇರಿನೊಂದಿಗೆ ೨ನೇ ಅತೀ ಹೆಚ್ಚು ಮಾರ್ಕೆಟ್ ಷೇರನ್ನು ಹೊಂದಿರುವ ಬ್ಯಾಂಕು ನಮ್ಮದಾಗಿದೆ. ೨೦೨೨-೨೩ನೇ ಸಾಲಿನ ಲೆಕ್ಕ ಪರಿಶೋಧನೆ (ಆಡಿಟ್)ನಲ್ಲಿ ಇದೇ ಮೊದಲ ಬಾರಿಗೆ ಶೇ.೯೨ರಷ್ಟು ಅಂಕ ಪಡೆದಿರುವುದು ಹರ್ಷದಾಯಕ ವಾಗಿರುತ್ತದೆ. ಬ್ಯಾಂಕು ಕಳೆದ ಹಲವು ವರ್ಷಗಳಿಂದ ಆಡಿಟ್‌ನಲ್ಲಿ "ಎ" ವರ್ಗೀಕರಣ ಪಡೆದಿದ್ದು, ಕರ್ನಾಟಕ ರಾಜ್ಯ ಸಹಕಾರಿ, ಅಪೆಕ್ಸ್ ಬ್ಯಾಂಕಿನಿAದ "ಅತ್ಯುತ್ತಮ ಸಾಧನಾ ಪ್ರಶಸ್ತಿ’’ಯ ವಿಶೇಷ ಬಹುಮಾನ ನೀಡಿ ಗೌರವಿಸ ಲಾಗಿದೆ ಎಂದು ಮಾಹಿತಿಯಿತ್ತರು.

ಮಾರ್ಚ್ ಅಂತ್ಯಕ್ಕೆ ಒಟ್ಟು ೨೮೬ ಸಹಕಾರ ಸಂಘಗಳು, ಬ್ಯಾಂಕಿನ ಸದಸ್ಯತ್ವವನ್ನು ಪಡೆದಿದ್ದು, ‘ಎ’ ವರ್ಗದ ಸರ್ಕಾರಿ ಷೇರು ಇರುವುದಿಲ್ಲ, ‘ಬಿ’ ವರ್ಗದ ಸದಸ್ಯ ಸಂಘಗಳಿAದ ರೂ.೨೮.೪೦ ಕೋಟಿ ಪಾಲು ಬಂಡವಾಳ ಹಾಗೂ ದೊಡ್ಡ ಮೊತ್ತದ ಸಾಲ ಪಡೆಯುವ ‘ಸಿ’ ವರ್ಗದ ಸದಸ್ಯರಿಂದ ರೂ. ೦.೦೩ಕೋಟಿ ಒಟ್ಟು ೨೮.೪೩ ಕೋಟಿ ಷೇರು ಬಂಡವಾಳ ಸಂಗ್ರಹಿಸಿದ್ದು, ಕಳೆದ ಸಾಲಿಗೆ ಹೋಲಿಸಿದಾಗ ರೂ.೧.೧೮ ಕೋಟಿ ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿ ರುತ್ತದೆ ಹಾಗೂ ಷೇರು ಬಂಡವಾಳ, ಶಾಸನಬದ್ಧ ಮೀಸಲು ನಿಧಿಗಳು ಹಾಗೂ ಬಟವಾಡೆಯಾಗದ ಲಾಭಾಂಶದ ಮೊತ್ತವನ್ನು ಒಳಗೊಂಡAತೆ ಒಟ್ಟು ರೂ.೧೧೫.೪೦ ಕೋಟಿ ಮೊತ್ತದ ಸ್ವಂತ ಬಂಡವಾಳ ವನ್ನು ಹೊಂದಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೬.೭೬ ಕೋಟಿ ಗಳಷ್ಟು ಹೆಚ್ಚಳವಾಗಿರುತ್ತದೆ. ೨೦೨೨-೨೩ನೇ ಸಾಲಿಗೆ ಬ್ಯಾಂಕಿನ ಒಟ್ಟು ವ್ಯವಹಾರವು ರೂ.೨೪೦೧.೧೦ ಕೋಟಿ ಗಳಾಗಿದ್ದು, ಹಿಂದಿನ ಸಾಲಿಗಿಂತ ರೂ. ೧೯೯.೧೮ ಕೋಟಿ ಹೆಚ್ಚಳವಾಗಿರುತ್ತದೆ.

ವರದಿ ಸಾಲಿನ ಅಂತ್ಯಕ್ಕೆ ರೂ. ೧೩೩೧.೧೦ ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೫೯.೬೮ಕೋಟಿ ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿ ಶೇ. ೪.೭೦ರ ಪ್ರಗತಿ ಸಾಧಿಸಲಾಗಿರುತ್ತದೆ. ೨೦೨೩-೨೪ನೇ ಸಾಲಿಗೆ ರೂ.೧೪೬೦.೦೦ ಕೋಟಿ ಠೇವಣಾತಿ ಸಂಗ್ರಹಣೆ ಗುರಿ ಹೊಂದಿದ್ದು, ಗುರಿ ಸಾಧಿಸಲು ಬ್ಯಾಂಕಿನ ಸಿಬ್ಬಂದಿಗಳಿಗೆ ಶ್ರೇಣಿವಾರು ಗುರಿ ನಿಗದಿಪಡಿಸಿ, ಠೇವಣಿ ಸಂಗ್ರಹಣೆ ಮಾಡಲು ಉತ್ತೇಜಿಸಲಾಗಿರುತ್ತದೆ. ವರದಿ ಸಾಲಿನಲ್ಲಿ ರೂ. ೯೨೪.೦೫ ಕೋಟಿ ಸಾಲ ವಿತರಣೆ ಮಾಡ ಲಾಗಿದ್ದು, ಈ ಪೈಕಿ ಕೃಷಿ ವಲಯಕ್ಕೆ ರೂ. ೫೪೦.೩೦ ಕೋಟಿ ಹಾಗೂ ಕೃಷಿಯೇತರ ವಲಯಕ್ಕೆ ರೂ. ೩೮೩.೭೫ ಕೋಟಿ ವಿತರಣೆಗಳಾಗಿರುತ್ತದೆ. ಹೊರಬಾಕಿ ನಿಂತ ಸಾಲ ರೂ. ೧೦೭೦.೩೦ ಕೋಟಿ ಆಗಿರುತ್ತದೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಸಾಲದ ಹೊರಬಾಕಿಯಲ್ಲಿ ರೂ.೧೩೯.೫೦ ಕೋಟಿ ಹೆಚ್ಚಳವಾಗಿರುತ್ತದೆ. ೨೦೨೩-೨೪ನೇ ಸಾಲಿಗೆ ಒಟ್ಟು ರೂ.೧೧೫೫.೦೦ ಕೋಟಿ ಸಾಲ ವಿತರಣೆಗೆ ಗುರಿ ನಿಗದಿಪಡಿಸಲಾಗಿದೆ.

ಸಾಲ ವಸೂಲಾತಿ: ಬ್ಯಾಂಕಿನ ಸಾಲ ವಸೂಲಾತಿ ಪ್ರಮಾಣವನ್ನು ಶೇ. ೯೯ ರಷ್ಟು ಮಾಡಲು ಆಡಳಿತ ಮಂಡಳಿ ಗುರಿ ಹೊಂದಿದ್ದು, ಬ್ಯಾಂಕಿನ ಒಟ್ಟಾರೆ ಸಾಲ ವಸೂಲಾತಿಯು ಶೇ.೯೫.೮೦ ರಷ್ಟಿದೆ.

ಜಿಲ್ಲೆಯ ಸಹಕಾರ ಸಂಘ ಹಾಗೂ ಬ್ಯಾಂಕಿನ ಶಾಖೆಗಳ ಮುಖಾಂತರ ಒಟ್ಟು ೭೦೧೯ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ವರದಿ ಸಾಲಿನಲ್ಲಿ ಹೊಸದಾಗಿ ೩೪೪ ಗುಂಪುಗಳನ್ನು ರಚಿಸಲಾಗಿರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ಡಿಸಿಸಿ ಬ್ಯಾಂಕುಗಳ ನಿವ್ವಳ ಆಸ್ತಿಗೆ ಅನುಗುಣವಾಗಿ ಬಂಡವಾಳ ಸಾಮರ್ಥ್ಯದ ಪ್ರಮಾಣವು ಶೇ.೯ಕ್ಕೆ ಮೇಲ್ಪಟ್ಟು ಇರಬೇಕಾಗಿದ್ದು, ದಿ.೩೧.೦೩.೨೦೨೩ರ ಅಂತ್ಯಕ್ಕೆ ಶೇ. ೧೧.೦೪ ರಷ್ಟಿದ್ದು ಉತ್ತಮವಾದ ಸಾಮರ್ಥ್ಯ ವನ್ನು ಹೊಂದಿರುತ್ತದೆ ಎಂಬುದಾಗಿ ಅವರು ವಿವರಿಸಿದರು. ಬ್ಯಾಂಕಿನ ಇನ್ನಿತರ ಕಾರ್ಯ ಚಟುವಟಿಕೆಗಳು, ಹೊಸ ಸಾಲ ಯೋಜನೆಗಳ ಬಗ್ಗೆ ವಿವರ ನೀಡಿದ ಬಾಂಡ್ ಗಣಪತಿ ಹೆಚ್ಚು ಲಾಭ ಗಳಿಸುವುದರೊಂದಿಗೆ ರಾಜ್ಯದಲ್ಲೇ ಅತೀ ಹೆಚ್ಚು ಡಿವಿಡೆಂಡ್ ನೀಡುವ ಬ್ಯಾಂಕು ನಮ್ಮದಾಗಿದ್ದು, ಈ ಮೂಲಕ ಸಹಕಾರ ಸಂಘಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಶತಮಾನೋತ್ಸವ ಭವನ ನಿರ್ಮಾಣ: ೨೦೨೧ನೇ ವರ್ಷಕ್ಕೆ ಬ್ಯಾಂಕು ಶತಮಾನ ಪೂರ್ಣ ಗೊಳಿಸಿರುವ ಹಿನ್ನೆಲೆಯಲ್ಲಿ ಸುಸಜ್ಜಿತವಾದ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಆಡಳಿತ ಮಂಡಳಿಯ ತೀರ್ಮಾನದಂತೆ ಹಾಗೂ ವಾರ್ಷಿಕ ಮಹಾಸಭೆಯ ಅನುಮೋದನೆಯಂತೆ, ಸಹಕಾರ ಇಲಾಖೆಯಿಂದ ಆಡಳಿತಾತ್ಮಕ ಅನುಮತಿಯನ್ನು ಪಡೆದು ಅಂದಾಜು ರೂ.೮.೪೨ ಕೋಟಿಗಳ ಶತಮಾ ನೋತ್ಸವ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿ ದಿ.೦೧-೧೨-೨೦೨೧ ರಲ್ಲಿ ಕೆಲಸ ನಿರ್ವಹಿಸಲು ಆದೇಶ ನೀಡಲಾಗಿದೆ. ಕಟ್ಟಡದ ಎಲ್ಲಾ ಕೆಲಸಗಳು ಡಿಸೆಂಬರ್ ೨೦೨೩ರ ಅಂತ್ಯದೊಳಗೆ ಪೂರ್ಣಗೊಳ್ಳ ಲಿರುವುದರಿಂದ ೨೦೨೪ರ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾAತಿಯ ಶುಭಗಳಿಗೆಯಲ್ಲಿ ಜಿಲ್ಲೆಯ ಸಮಸ್ತ ಸಹಕಾರಿಗಳನ್ನೊಳಗೊಂಡAತೆ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಸಹಕಾರ ಸಮ್ಮೇಳನವನ್ನು ಆಯೋಜಿಸಿ, ಕಟ್ಟಡವನ್ನು ಲೋಕಾ ರ್ಪಣೆಗೊಳಿಸುವ ಚಿಂತನೆ ನಡೆಸಲಾಗಿದೆ.

ಬ್ಯಾಂಕಿನ ೨೨ನೇ ಶಾಖೆಯಾಗಿ ಸಂಪಾಜೆಯಲ್ಲಿ ದಿ. ೩೦-೦೯-೨೦೨೩ರ ಒಳಗೆ, ೨೩ನೇ ಶಾಖೆಯಾಗಿ ಮಾದಾಪುರದಲ್ಲಿ, ದಿ. ೩೧-೧೦-೨೦೨೩ರ ಒಳಗೆ ಹಾಗೂ ೨೪ನೇ ಶಾಖೆಯಾಗಿ ಭಾಗಮಂಡಲದಲ್ಲಿ ದಿ. ೨೪-೦೧-೨೦೨೪ರಂದು ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬ್ಯಾಂಕಿನ ಪೂರಕ ಅಭಿವೃದ್ಧಿಗೆ ಸಾಲ ನೀಡುವಿಕೆಗೆ ಒತ್ತು ಕೊಡುವುದು ಪ್ರಮುಖ ಅಂಶವಾಗಿದ್ದು, ಪ್ರಸ್ತುತ ಜಿಲ್ಲೆಯ ರೈತರ ಸ್ಥಿರಾಸ್ತಿ ದಾಖಲಾತಿ ಗಳಲ್ಲಿ ಇರುವ ನ್ಯೂನತೆಗಳಾದ ಪೌತಿ ಖಾತೆಗಳು, ಜಂಟಿ ಜಮೀನುದಾರರು, ಪಟ್ಟೆದಾರಿಕೆಯನ್ನು ಸರಿಪಡಿಸಿದ್ದಲ್ಲಿ, ಗರಿಷ್ಠ ಪ್ರಮಾಣದ ಸಾಲ ನೀಡಬಹುದಾಗಿದೆ, ಈಗಿನ ಫ್ರೂಟ್ ತಂತ್ರಾAಶವನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವುದು. ಇದರೊಂದಿಗೆ ಅಲ್ಪಾವಧಿ ಬೆಳೆ ಸಾಲ ಪಡೆಯಲು ಇದೀಗ, ಚಾಲ್ತಿಯಲ್ಲಿರುವ ಕಾಫಿ ಬೆಳೆಗಾರರಿಗೆ ಮಾತ್ರ ನಮೂನೆ-೩ ನೋಂದಣಿ ಪ್ರಕ್ರಿಯೆ ಸಲ್ಲಿಸುವಾಗ ಕಾಡುತ್ತಿರುವ ಮುದ್ರಾಂಕ ಶುಲ್ಕದ ಸಮಸ್ಯೆಯನ್ನು ಬಗೆಹರಿಸಲು ಹಲವಾರು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಲಾಗಿ ಪರಿಹಾರದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಕನ್ನಂಡ ಎ. ಸಂಪತ್, ಕಿಮ್ಮುಡಿರ ಎ. ಜಗದೀಶ್ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ್ ಇದ್ದರು.