ವೀರಾಜಪೇಟೆ, ಸೆ. ೧೯: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಆಕೆ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲೇ ಪೆಟ್ರೋಲ್ ಸುರಿದು ದಾರುಣವಾಗಿ ಹತ್ಯೆಗೈದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳ

ರಾಜ್ಯದ ಕೇಂದ್ರ ಸ್ಥಾನವಾದ ತಿರುವನಂತಪುರAನಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ದಿವಂಗತ ಅಜೀಜ್ ಮತ್ತು ಫಾತಿಮ ದಂಪತಿಯ ತೃತೀಯ ಪುತ್ರಿ ನಾದೀರ (೩೮) ಹತ್ಯೆಯಾದ ಮಹಿಳೆ.

ಮೃತ ಮಹಿಳೆ ನಾದೀರಳನ್ನು ವೀರಾಜಪೇಟೆ ನಗರದ ನಿವಾಸಿ ಆಟೋ ಚಾಲಕನಾಗಿದ್ದ ರಹೀಂ ಎಂಬಾತನಿಗೆ ವಿವಾಹ ಮಾಡಿಕೊಡ ಲಾಗಿತ್ತು. ವೀರಾಜಪೇಟೆ ನಗರದಲ್ಲಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೊರೊನಾ ನಂತರ ಆಟೋವನ್ನು ಮಾರಾಟ ಮಾಡಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆ ಮತ್ತು ತಿರುವನಂತಪುರA ಜಿಲ್ಲೆಯ ಮಧ್ಯಭಾಗದ ಗ್ರಾಮವಾದ ಪಾರಿಪಳ್ಳಿ ಎಂಬಲ್ಲಿ ದಂಪತಿ ಜೀವನ ಮುಂದುವರಿಸಿದ್ದರು. ನಾದೀರ ತಿರುವನಂತಪುರAನ ಅಕ್ಷಯ ಎಂಟರ್‌ಪ್ರೆöÊಸಸ್‌ನಲ್ಲಿ ಸುಮಾರು ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ದಿನ ಕಳೆದಂತೆ ರಹೀಂ ಪತ್ನಿ ನಾದೀರ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದ್ದು,

ಪತ್ನಿಯನ್ನು ಹತ್ಯೆಗೈದು ಪತಿ ಆತ್ಮಹತ್ಯೆ(ಮೊದಲ ಪುಟದಿಂದ) ಒಮ್ಮೆ ನಾದೀರ ಗಂಭೀರವಾಗಿ ಹಲ್ಲೆಗೊಳ ಗಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿ ದ್ದಳು. ಗ್ರಾಮಸ್ಥರ ದೂರಿನ ಮೇರೆ ಪಾರಿಪಳ್ಳಿ ಪೊಲೀಸ್À ಠಾಣೆಯಲ್ಲಿ ರಹೀಂ ಮೇಲೆ ಪೊಲೀಸರು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಎಂದು ಪ್ರಕರಣ ದಾಖಲಿಸಿದ್ದರು. ರಹೀಂನನ್ನು ಬಂಧಿಸಿ ಜೈಲಿಗಟ್ಟಿದ್ದರು.

ಜೈಲುವಾಸ ಅನುಭವಿಸಿ ಹಿಂತಿರುಗಿ ಬಂದಿದ್ದ ರಹೀಂ ಪತ್ನಿಯ ಮೇಲಿನ ದ್ವೇಷದಿಂದ ತಾ. ೧೬ರಂದು ಹಾಡಹಗಲೇ ನಾದೀರ ಕೆಲಸ ಮಾಡುತ್ತಿದ್ದ ಅಕ್ಷಯ ಎಂಟರ್ ಪ್ರೆöÊಸಸ್‌ನ ಕಚೇರಿ ಒಳಗೆ ನುಗ್ಗಿದ ರಹೀಂ ತನ್ನ ಕೈಚೀಲದಲ್ಲಿದ್ದ ಕತ್ತಿಯನ್ನು ತೋರಿಸಿ ಅಲ್ಲಿದ್ದ ಕಚೇರಿ ಸಿಬ್ಬಂದಿಯನ್ನು ಬೆದರಿಸಿದ್ದಾನೆ. ಬೆದರಿದ ಸಿಬ್ಬಂದಿ ಹೊರ ನಡೆದಿದ್ದಾರೆ. ಬಳಿಕ ಚೀಲದಲ್ಲಿರಿಸಲಾದ ಪೆಟ್ರೋಲ್‌ನ್ನು ಪತ್ನಿ ನಾದೀರ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ನಾದೀರ ದೇಹವು ಸಂಪೂರ್ಣವಾಗಿ ಸುಟ್ಟುಹೋದ ಪರಿಣಾಮ ನಾದೀರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ರಹೀಂ ಸ್ಥಳದಿಂದ ಪರಾರಿಯಾಗಲು ಯತ್ನಿಸಿದನಾದರೂ ಗ್ರಾಮಸ್ಥರು ಮತ್ತು ಪೊಲೀಸರ ಹೆದರಿಕೆಯಿಂದ ಸನಿಹದಲ್ಲೇ ಇದ್ದ ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಿರುವನAತಪುರA ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರಿಯಾಜೋಸೆಫ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ದಂಪತಿಯ ಇಬ್ಬರು ಮಕ್ಕಳಲ್ಲಿ ಒಬ್ಬ ೧೦ನೇ ತರಗತಿಯಲ್ಲಿ, ಇನ್ನೋರ್ವ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೀಗ ಅನಾಥರಾಗಿದ್ದಾರೆ. ಘಟನೆ ಬಗ್ಗೆ ತಿಳಿದ ಬಳಿಕ ನಾದೀರಳ ಕುಟುಂಬ ತಿರುವಂತನಪುರAಗೆ ತೆರಳಿದೆ.

-ಕಿಶೋರ್‌ಕುಮಾರ್ ಶೆಟ್ಟಿ