ಗೋಣಿಕೊಪ್ಪಲು, ಸೆ. ೧೨: ಅಮ್ಮತ್ತಿ ಹೋಬಳಿಯ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಾನ ಎಂಬ ಹಾಡಿಯಲ್ಲಿ ಹುಲಿ ದಾಳಿ ನಡೆಸಿದ್ದು, ಗ್ರಾಮದ ಹೆಚ್.ಸಿ.ಸ್ವಾಮಿ ಎಂಬವರಿಗೆ ಸೇರಿದ ಗಬ್ಬದ ಹಸುವನ್ನು ಕೊಂದು ಹಾಕಿದೆ.

ಬೆಳಿಗ್ಗೆ ೧೦ ಗಂಟೆ ವೇಳೆ ಎಂದಿನAತೆ ತನ್ನ ಹಸುವನ್ನು ಮನೆಯ ಸಮೀಪದ ರಸ್ತೆಯ ಬದಿಯಲ್ಲಿ ಮೇಯಲು ಬಿಟ್ಟು ಬೆಳಗಿನ ಉಪಹಾರಕ್ಕಾಗಿ ಮನೆಗೆ ಬಂದ ವೇಳೆಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಮೀಪದ ಕಾಡಿಗೆ ಎಳೆದು ತಂದಿದೆ. ಹಸುವಿನ ಚೀರಾಟ ಕೇಳಿ ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಹುಲಿಯು ಹಸುವನ್ನು ಕೊಂದು ಅರಣ್ಯದತ್ತ ತೆರಳಿದೆ.

ಈ ಹಿಂದೆ ಮೂರು ಬಾರಿ ಹುಲಿ ದಾಳಿ ನಡೆಸಿ, ಸ್ವಾಮಿಯವರ ಹಸುವನ್ನು ಕೊಂದು ಹಾಕಿತ್ತು. ಇದೀಗ ಮತ್ತೊಂದು ಘಟನೆ ನಡೆಸಿದೆ. ಹಸು ಸಾಕಾಣಿಕೆಗೆ ಬ್ಯಾಂಕ್‌ನಿAದ ಸಾಲ ಮಾಡಿರುವುದಾಗಿ ಹಸು ಕಳೆದುಕೊಂಡ ಸ್ವಾಮಿ ತನ್ನ ನೋವನ್ನು ಹಂಚಿಕೊAಡರು.

ಶಾಸಕ ಎ.ಎಸ್.ಪೊನ್ನಣ್ಣ ಅವರ ನಿರ್ದೇಶನದ ಮೇರೆ ಸ್ಥಳಕ್ಕೆ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಭೇಟಿ ನೀಡಿ ಹಸು ಕಳೆದುಕೊಂಡ ಮಾಲೀಕರೊಂದಿಗೆ ಮಾಹಿತಿ ಪಡೆದರು.

ದೂರವಾಣಿ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಪೊನ್ನಣ್ಣ ಹುಲಿ ಸೆರೆಗೆ ಬೇಕಾದ ಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಹಾಗೂ ಪರಿಹಾರ ವಿತರಣೆಗೆ ಅರಣ್ಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಹಸುವಿನ ಮೇಲೆ ಹುಲಿ ದಾಳಿ ನಡೆಸಿದ ಸ್ಥಳದಲ್ಲಿ ಹುಲಿಯ ಸಂಚಾರದ ಮಾಹಿತಿ ತಿಳಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕ್ಯಾಮರಾ ಅಳವಡಿಸಿದ್ದಾರೆ.

(ಮೊದಲ ಪುಟದಿಂದ) ಈ ವೇಳೆ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಹೆಚ್.ಬಿ. ಗಣೇಶ್, ಕೆ.ರಘು, ಮಾಲ್ದಾರೆ ಗ್ರಾ.ಪಂ. ಸದಸ್ಯರಾದ ಅನೀಫ್, ಕಿರಣ, ಮಾಜಿ ಗ್ರಾ.ಪಂ.ಸದಸ್ಯರಾದ ಎಂ.ಪಿ. ಗಣೇಶ್, ರಾಜೇಶ್, ಶಿವಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರವಣ್ ಕುಮಾರ್ ಮತ್ತಿತರರು ಹಾಜರಿದ್ದರು.