ಮಡಿಕೇರಿ, ಸೆ. ೧೨: ಜಿಲ್ಲೆಯ ಕಾಫಿ ಕೃಷಿಕರಿಗೆ ೧೦ ಹೆಚ್.ಪಿ. ಪಂಪ್‌ಸೆಟ್ ತನಕ ಉಚಿತ ವಿದ್ಯುತ್ ಒದಗಿಸಬೇಕು, ಜಿಲ್ಲೆಯಲ್ಲಿ ಬರಗಾಲ ಸೃಷ್ಟಿಯಾಗಿರುವ ಹಿನ್ನೆಲೆ ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರ ಸಾಲಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲು ಕೊಡಗು ಜಿಲ್ಲಾ ಸಹಕಾರಿ ಯೂನಿಯನ್ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.

ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ಸಂಘದ ಸುವರ್ಣ ಮಹೋತ್ಸವ ಸಭಾಂಗಣ ದಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.

ಸದಸ್ಯ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ, ಕಾಫಿಯನ್ನು ಕೃಷಿಯಡಿ ತರಬೇಕು. ವಾಣಿಜ್ಯ ಬೆಳೆಯಡಿ ಕಾಫಿ ಬರುವುದರಿಂದ ಸರಕಾರದ ಯೋಜನೆಗಳು ಸಿಗುತ್ತಿಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದ ಅವರು, ಸಹಕಾರಿ ಸಂಘಗಳಲ್ಲಿ ಕಾನೂನು, ನಿಯಮ ಬದಲಾವಣೆ ತರುವ ಸಂದರ್ಭ ಸಹಕಾರಿ ಗಳೊಂದಿಗೆ ಚರ್ಚಿಸಿ ತೀರ್ಮಾನ ಕೈ ಗೊಳ್ಳಬೇಕು ಎಂದು ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಮನು ಮುತ್ತಪ್ಪ, ಹಿಂದಿನಿAದಲೇ ಕಾಫಿಯನ್ನು ಕೃಷಿಗೆ ಪರಿಗಣಿಸಬೇಕು ಎಂಬ ಒತ್ತಾಯವಿದೆ.

(ಮೊದಲ ಪುಟದಿಂದ) ಈ ಸಂಬAಧ ನುರಿತರೊಂದಿಗೆ ಚರ್ಚಿಸಿದ ಸಂದರ್ಭ ಈ ಬೇಡಿಕೆಯಿಂದ ಗೊಂದಲ ಸೃಷ್ಟಿಯಾಗಿ ಸಿಗುವ ಯೋಜನೆಯೂ ಸ್ಥಗಿತಗೊಂಡರೆ ಸಮಸ್ಯೆಯಾಗುತ್ತದೆ ಎಂದು ಸಲಹೆ ಬಂದ ಹಿನ್ನೆಲೆ ಮುಂದಿನ ಕ್ರಮಕೈಗೊಂಡಿಲ್ಲ ಎಂದು ಸಭೆಗೆ ತಿಳಿಸಿದ ಅವರು, ಕಾಫಿ ಕೃಷಿಕರಿಗೆ ೧೦ ಹೆಚ್.ಪಿ. ವಿದ್ಯುತ್ ನೀಡಬೇಕು. ಈ ಸಂಬAಧ ಸರಕಾರವನ್ನು ಒತ್ತಾಯಿಸಲಾಗುವುದು. ರಾಜ್ಯ ಸಹಕಾರಿ ಯೂನಿಯನ್‌ನ ಗಮನ ವನ್ನೂ ಸೆಳೆಯಲಾಗುವುದು ಎಂದರು.

ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಬರಗಾಲದ ಪರಿಸ್ಥಿತಿ ಜಿಲ್ಲೆ ಎದುರಿಸುತ್ತಿದೆ. ಕೃಷಿಕರು ಸಂಕಷ್ಟದಲ್ಲಿದ್ದಾರೆ. ಈ ಹಿಂದಿನ ಸರಕಾರ ಪ್ರಾಕೃತಿಕ ವಿಕೋಪ ಸಂದರ್ಭ ಬೆಳೆಹಾನಿಗೆ ಪರಿಹಾರ ನೀಡಿದೆ. ಈ ವರ್ಷ ಮಳೆ ಇಲ್ಲದ ಕಾರಣ ಬರಗಾಲ ಪೀಡಿತ ಪ್ರದೇಶ ಎಂದು ಜೊತೆಗೆ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.

ಸಹಕಾರ ಸಂಘದಲ್ಲಿ ಅವ್ಯವಹಾರ ಪ್ರಕರಣದಲ್ಲಿ ಆರೋಪ ಹೊತ್ತು ಸದಸ್ಯತ್ವ ಕಳೆದುಕೊಂಡ ವ್ಯಕ್ತಿ ಮರಳಿ ಸದಸ್ಯತ್ವ ಪಡೆಯುವ ಪ್ರಯತ್ನ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಸಹಕಾರ ಇಲಾಖೆ ಉಪ ನಿಬಂಧಕ ಕೃಷ್ಣ ಪ್ರಸಾದ್ ಮಾತನಾಡಿ, ಆರೋಪ ಸಾಭೀತಾಗಿ ಕಾನೂನಾತ್ಮಕ ಕ್ರಮಕೈಗೊಂಡರೆ ಸದಸ್ಯತ್ವ ರದ್ದುಗೊಳಿಸಬಹುದು ಎಂದು ಮಾಹಿತಿ ನೀಡಿದರು.

ಈ ಹಿಂದೆ ಘೋಷಿಸಿದ್ದ ಸಾಲ ಮನ್ನಾ ಕೆಲವರಿಗೆ ಆಗಿಲ್ಲ ಎಂದು ಸದಸ್ಯರು ದೂರಿದರು. ತಾಂತ್ರಿಕ ಸಮಸ್ಯೆ, ಪೂರಕ ದಾಖಲೆಗಳು ಸಮರ್ಪಕವಾಗಿ ನೀಡದಿದ್ದರೆ ಸಾಲ ಮನ್ನಾಕ್ಕೆ ತೊಡಕು ಉಂಟಾಗುತ್ತದೆ ಎಂದು ಅಧ್ಯಕ್ಷ ಮನುಮುತ್ತಪ್ಪ ಮಾಹಿತಿ ನೀಡಿದರು.

ಸಹಕಾರ ದವಸ ಭಂಡಾರಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಳ್ಳಬೇಕಾಗಿದೆ ಎಂದು ರಮೇಶ್ ಮುದ್ದಯ್ಯ ಪ್ರಸ್ತಾಪಿಸಿದರು.

ಸಹಕಾರ ತರಬೇತಿ ಕೇಂದ್ರ ಉತ್ತಮವಾಗಿ ಮುನ್ನಡೆಯುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ದಾಖಲು ಮಾಡಲು ಸದಸ್ಯರು ಪ್ರಯತ್ನಿಸಬೇಕು. ಸದಸ್ಯರಿಗೆ ಪೂರಕವಾಗಿರುವ ತರಬೇತಿಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಮನು ಮುತ್ತಪ್ಪ ಕೋರಿದರು.

ಸಭೆಯಲ್ಲಿ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ, ನಿರ್ದೇಶಕರು ಗಳಾದ ಮುಕ್ಕಾಟಿರ ಪ್ರೇಮ ಸೋಮಯ್ಯ, ನಂದಿನೆರವAಡ ರವಿ ಬಸಪ್ಪ, ಪಾಲಚಂಡ ಸುಬ್ಬಯ್ಯ, ಕೊಡಪಾಲು ಗಣಪತಿ, ಚಿಮ್ಮಣಮಾಡ ಕೃಷ್ಣ ಗಣಪತಿ, ವಾಂಚಿರ ಅಜಯ್ ಕುಮಾರ್, ಪೆಮ್ಮಂಡ ಭರತ್, ಕೊಂಗAಡ ಮುದ್ದಯ್ಯ, ನಾಪಂಡ ಉಮೇಶ್ ಉತ್ತಪ್ಪ, ಪಂಜಿಪಳ್ಳ ಯತೀಶ್, ಕೇಂದ್ರ ಬ್ಯಾಂಕ್ ಪ್ರತಿನಿಧಿ ಕನ್ನಂಡ ಸಂಪತ್ ಹಾಜರಿದ್ದರು.