ಸೋಮವಾರಪೇಟೆ, ಸೆ. ೮: ಇಲ್ಲಿನ ಶ್ರೀರಾಮ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಸಂಘದ ಸದಸ್ಯರ ಸಹಕಾರದಿಂದಾಗಿ ಪ್ರಸಕ್ತ ಸಾಲಿನಲ್ಲಿ ರೂ. ೮.೫೦ ಲಕ್ಷ ಲಾಭಗಳಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ವ್ಯವಹಾರ ಮಾಡುವ ಮೂಲಕ ಹೆಚ್ಚಿನ ಲಾಭದ ನಿರೀಕ್ಷೆಯನ್ನು ಸಂಘದ ಆಡಳಿತ ಮಂಡಳಿ ಇರಿಸಿಕೊಂಡಿದೆ ಎಂದು ಮಂಜುನಾಥ್ ತಿಳಿಸಿದರು.

ಉಪಾಧ್ಯಕ್ಷ ಎನ್.ಎನ್. ರಮೇಶ್, ನಿರ್ದೇಶಕರುಗಳಾದ ಬಿ.ಎಂ. ಚಂದ್ರಾಜು, ಬಿ.ಎಸ್. ಅನಂತ್‌ರಾಮ್, ಬಿ.ಸಿ. ರೇವಣ್ಣ, ಬಿ.ಎಲ್. ಹರೀಶ್, ಬಿ.ಎಂ. ಸುರೇಶ್, ಬಿ.ಕೆ. ಉದಯಕುಮಾರ್, ಸತಿನ್ ಸಿದ್ದಪ್ಪ, ಡಿ. ಜಯೇಶ್, ಹೇಮಲತಾ ಮಂಜುನಾಥ್, ಜ್ಯೋತಿ ಶುಭಾಕರ್, ಬಿ.ಸಿ. ವೆಂಕಟೇಶ್, ಲೀಲಾ ನಿರ್ವಾಣಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ಸುದೀಪ ಮತ್ತಿತರರು ಇದ್ದರು.