ವೀರಾಜಪೇಟೆ, ಸೆ. ೮: ವೀರಾಜಪೇಟೆ ಕೊಡವ ಸಮಾಜದ ಶತಮಾನೋತ್ಸವದ ಅಂಗವಾಗಿ ತಾ. ೨೩ ಮತ್ತು ೨೪ ರಂದು ವೀರಾಜಪೇಟೆ ಕೊಡವ ಸಮಾಜದ ಅಧೀನದಲ್ಲಿರುವ ತ್ರೀವೇಣಿ ಶಾಲೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ನೂರಾಂಡ್ ನಮ್ಮೆಯನ್ನು ಆಚರಿಸಲಾಗುತ್ತಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ತಿಳಿಸಿದ್ದಾರೆ.
ಕೊಡವ ಸಮಾಜದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೨೧ರಲ್ಲಿ ಕೊಡವ ಸಮಾಜ ಪ್ರಾರಂಭಗೊAಡು ನೂರು ವಸಂತಗಳನ್ನು ಕಳೆದಿದೆ. ಸಮಾಜ ಪ್ರಸ್ತುತ ಸರಿಸುಮಾರು ೨೪೦೦ ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಕೊರೊನಾ, ಪ್ರಕೃತಿ ವಿಕೋಪ ಸಂದರ್ಭ ಹಲವಾರು ಜನಪರ ಕಾರ್ಯಕ್ರಮದಲ್ಲಿ ಸಮಾಜ ತೊಡಗಿಸಿಕೊಂಡಿದೆ. ನೂರಾಂಡ್ ನಮ್ಮೆ ಆಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎರಡು ದಿನವು ಅಪರಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.
ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ ನೂರಾಂಡ್ ನಮ್ಮೆಯ ಅಂಗವಾಗಿ ತಾ. ೨೪ ರಂದು ಪೂರ್ವಾಹ್ನ ೯ ಗಂಟೆಗೆ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಗಡಿಯಾರ ಕಂಬದಿAದ ಡೊಡ್ಡಟ್ಟಿ ಚೌಕಿ, ಅಪ್ಪಯ್ಯಸ್ವಾಮಿ ರಸ್ತೆ ಮೂಲಕ ಮೆರವಣಿಗೆಯಲ್ಲಿ ಜಿಮ್ಮಿ ಕಲಾ ವೇದಿಕೆಗೆ ತೆರಳಲಾಗುವುದು.
ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಕೊಡಗು- ಮೈಸೂರು ಸಂಸದ ಪ್ರತಾಪ್ಸಿಂಹ, ವಿಧಾನ ನಮ್ಮೆಯ ಅಂಗವಾಗಿ ತಾ. ೨೪ ರಂದು ಪೂರ್ವಾಹ್ನ ೯ ಗಂಟೆಗೆ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಗಡಿಯಾರ ಕಂಬದಿAದ ಡೊಡ್ಡಟ್ಟಿ ಚೌಕಿ, ಅಪ್ಪಯ್ಯಸ್ವಾಮಿ ರಸ್ತೆ ಮೂಲಕ ಮೆರವಣಿಗೆಯಲ್ಲಿ ಜಿಮ್ಮಿ ಕಲಾ ವೇದಿಕೆಗೆ ತೆರಳಲಾಗುವುದು.
ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಕೊಡಗು- ಮೈಸೂರು ಸಂಸದ ಪ್ರತಾಪ್ಸಿಂಹ, ವಿಧಾನ ಹೊಡೆಯುವುದು, ಭಾರದ ಗುಂಡು ಎಸೆತ, ವಾಲಗತಾಟ್, ಅಂತರ ಕೊಡವ ಸಮಾಜಗಳ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಪೈಪೋಟಿಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ ಮಾತನಾಡಿ, ತಾ. ೨೪ ರಂದು ಸಭಾ ಕಾರ್ಯಕ್ರಮ ಮುಗಿದ ಬಳಿಕ ತ್ರಿವೇಣಿ ಶಾಲಾ ಮಕ್ಕಳಿಂದ, ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ, ಪೊಮ್ಮಕ್ಕಡ ಕೂಟ ಹಾಗೂ ತಲಕಾವೇರಿ ತಿಂಗಕೋರ್ ಮೊಟ್ಟ್ ಕೂಟಾಳಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭ ನಿರ್ದೇಶಕರು ಗಳಾದ ಬಾಚಿರ ಜಗದೀಶ್, ಚೇಮಿರ ಅರ್ಜುನ, ತಾತಂಡ ಕಬೀರ್, ಪುಲಿಯಂಡ ಪೊನ್ನಣ್ಣ, ಚೋಕಂಡ ರೇಖಾ ಪುಷ್ಪಾವತಿ, ಮೇರಿಯಂಡ ಗಾಯತ್ರಿ, ಮುಲ್ಲೆಂಗಡ ಶೀಲಾ ಅಪ್ಪಯ್ಯ, ಇತರರು ಉಪಸ್ಥಿತರಿದ್ದರು.