ಸುಂಟಿಕೊಪ್ಪ, ಸೆ. ೮: ತಾ.೧೦ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಎಸ್‌ಎಸ್‌ಎಫ್ ೫೦ನೇ ವರ್ಷಾಚರಣೆ ಗೋಲ್ಡನ್ ಫಿಫ್ಟಿ ಐತಿಹಾಸಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಮಾದಕ ವ್ಯಸನದ ವಿರುದ್ಧ ಹಾಗೂ ಗೋಲ್ಡನ್ ಫಿಫ್ಟಿ ಸಂದೇಶ ವಾಹನ ಜಾಥಾ ನಡೆಯಿತು. ಜಿಲ್ಲಾಧÀ್ಯಕ್ಷ ಝುಬೈರ್ ಸಅದಿ ಉಸ್ತಾದ್ ಪ್ರಾರ್ಥನೆಯೊಂದಿಗೆ ಪೊನ್ನಂಪೇಟೆ ಪಟ್ಟಣದಿಂದ ಪ್ರಾರಂಭಗೊAಡ ವಾಹನ ಜಾಥಾ ಗೋಣಿಕೊಪ್ಪ, ವೀರಾಜಪೇಟೆ, ಅಮ್ಮತ್ತಿ, ಪಾಲಿಬೆಟ್ಟ, ಸಿದ್ದಾಪುರ, ನೆಲ್ಲಿಹುದಿಕೇರಿ, ಕುಶಾಲನಗರ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಮಡಿಕೇರಿ, ಮೂರ್ನಾಡು, ಮಾರ್ಗವಾಗಿ ನಾಪೋಕ್ಲುವಿನಲ್ಲಿ ಕೊನೆಗೊಂಡಿತು. ರಾಷ್ಟಿçÃಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ವೀರಾಜಪೇಟೆ ಡಿವಿಷನ್ ಅಧÀ್ಯಕ್ಷ ಕಮರುದ್ದೀನ್ ಅನ್ವಾರಿ ಅಹ್ಸನಿ ಮಡಿಕೇರಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ಲಾ ಹಿಮಮಿ ಸಖಾಪಿ ಪಾಲ್ಗೊಂಡಿದ್ದರು.

ಒAದೊAದು ಪಟ್ಟಣದಲ್ಲಿಯೂ ಅಲ್ಲಿನ ಕಾರ್ಯಕರ್ತರೂ ಸಾತ್ ನೀಡಿದರು.

ಗೋಲ್ಡನ್ ಫಿಫ್ಟಿ ಸಮ್ಮೇಳನದ ಯಶಸ್ವಿಗೆ ಸರ್ವರಿಗೂ ಕರೆ ನೀಡಿದರು