ಸಿದ್ದಾಪುರ, ಸೆ. ೭: ಸುಂಟಿಕೊಪ್ಪ ಭಾಗದಲ್ಲಿ ಉಪಟಳ ನೀಡುತ್ತಿರುವ ಮತ್ತೊಂದು ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಕಾರ್ಯಾಚರಣೆ ನಡೆಸಿದರು.
ಸಾಕಾನೆಗಳಾದ ಪ್ರಶಾಂತ್, ವಿಕ್ರಮ್, ಅಜಯ, ಸುಗ್ರೀವಾ, ಹರ್ಷ, ಲಕ್ಷö್ಮಣಗಳೊಂದಿಗೆ ಅರಣ್ಯ ಸಿಬ್ಬಂದಿ ಸೇರಿ ಮೋದೂರು, ಕತ್ತಲೆಕಾಡು, ಅರೆಕಾಡು, ಹೊರೂರು ಭಾಗದಲ್ಲಿ ಸಲಗದ ಸೆರೆಗೆ ಮಳೆಯ ನಡುವೆ ಕಾರ್ಯಾಚರಣೆ ನಡೆಸಿದರೂ ಸಲಗ ಪತ್ತೆಯಾಗಲಿಲ್ಲ. ಕಾರ್ಯಾಚರಣೆಯಲ್ಲಿ ಆನೆ ಕಾರ್ಯಪಡೆಯ ಮುಖ್ಯಸ್ಥರಾದ ಎ.ಟಿ. ಪೂವಯ್ಯ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಎ.ಎ. ಗೋಪಾಲ್ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಚೇತನ್, ಉಪವಲಯ ಅರಣ್ಯಾಧಿಕಾರಿ ದೇವಯ್ಯ ಸೇರಿದಂತೆ ೪೦ಕ್ಕೂ ಅಧಿಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು. -ವಾಸು.