ನಾಪೋಕ್ಲು, ಸೆ. ೭: ನಾಪೋಕ್ಲು ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ತೋಟದ ಮಾಲೀಕರು ತಮ್ಮ ತಮ್ಮ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರ ರಾಜ್ಯದಿಂದ ಬಂದAತಹ ಹಾಗೂ ಹೊರ ಜಿಲ್ಲೆಯಿಂದ ಬಂದAತಹ ಎಲ್ಲಾ ಕೂಲಿ ಕಾರ್ಮಿಕರ ಬಗ್ಗೆ ಕೆಲಸಕ್ಕೆ ಸೇರಿಸಿಕೊಳ್ಳುವ ಮುಂಚೆ ಅವರ ಸರಿಯಾದ ವಿಳಾಸವನ್ನು ಮತ್ತು ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ. ಹೊರಗಿನವರು ನೀಡಿದ ದಾಖಲಾತಿಗಳೊಂದಿಗೆ ಅವರ ಕುಟುಂಬದ ಸದಸ್ಯರ ಸಹಿತ ಠಾಣೆಗೆ ಕರೆತಂದು ಠಾಣೆಯಲ್ಲಿ ಹಾಜರುಪಡಿಸಿ ಅವರ ವಿವರ ದಾಖಲಾತಿಗಳೊಂದಿಗೆ ನೋಂದಾಯಿಸುವAತೆಯೂ, ಈ ಬಗ್ಗೆ ನಿರ್ಲಕ್ಷತನ ತೋರಿ ಯಾವುದಾದರೂ ಅಹಿತಕರ ಘಟನೆ ನಡೆದರೆ ತೋಟದ ಮಾಲೀಕರು ನೇರ ಹೊಣೆಗಾರ ರಾಗಿರುತ್ತಾರೆ ಎಂದು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.