ಕೊಡ್ಲಿಪೇಟೆ, ಸೆ. ೪: ಕೊಡ್ಲಿಪೇಟೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಯಬಮ್ ಇಂಟರ್‌ನ್ಯಾಷನಲ್ ವಾಟರ್ ಸಾಲಿಬಲ್ ಫರ್ಟಿಲೈಸರ್ ಮತ್ತು ವೈಭವಿ ಲಕ್ಷಿö್ಮÃ ಟ್ರೇಡರ್ ಸಹಯೋಗದಲ್ಲಿ ತಾ. ೬ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಗೆ ಸ್ಥಳೀಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸುಸ್ಥಿರ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಿ. ಭಗವಾನ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕ ಹೆಚ್.ಎಸ್. ಧರ್ಮರಾಜ್, ಸಂಪನ್ಮೂಲ ವ್ಯಕ್ತಿ ಡಾ. ಲೊನಿ ಪ್ರಸಾದ್, ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ವರಪ್ರಸಾದ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಕಾಫಿ ಮಂಡಳಿಯ ಬಿ.ವಿ. ರಂಜಿತ್‌ಕುಮಾರ್, ಸಿನಾ ಮಾಹನ್ ಅವರುಗಳು ಮಾಹಿತಿ ನೀಡಲಿದ್ದಾರೆ.