ಮಡಿಕೇರಿ, ಸೆ. ೪: ಮಡಿಕೇರಿಯ ಜಗನ್ನಾಥ್ ಮಂದಿರದಲ್ಲಿ ಕೃಷ್ಣಜನ್ಮಾಷ್ಠಮಿ ಉತ್ಸವ ನಡೆಯಲಿದೆ. ತಾ. ೬ರಂದು ಬೆಳಿಗ್ಗೆ ೮ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ತುಳಿಸಿ ಅರ್ಚನೆ, ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಅಭಿಷೇಕ ಕೀರ್ತನೆ, ಮಧ್ಯಾಹ್ನ ೧೨ ಗಂಟೆಗೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ತಾ. ೭ರಂದು ಸಂಜೆ ೬ ಗಂಟೆಯಿAದ ಕೀರ್ತನೆ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜಯಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ರಾತ್ರಿ ೯ ಗಂಟೆಯಿAದ ನಂದೋತ್ಸವ ಕಾರ್ಯಕ್ರಮ, ಕೃಷ್ಣ ಕಥಾ ಪ್ರವಚನ, ೧೦.೩೦ ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಜರುಗಲಿದೆ.