ಚಿಕ್ಕಮಗಳೂರು, ಸೆ. ೪: ಕೆಲವೇ ತಿಂಗಳುಗಳಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ನಡೆಯಲಿದ್ದು ನೋಂದಣಿ ಮಾಡಿಕೊಳ್ಳದ ಶಿಕ್ಷಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿ ತಮಗಿರುವ ಹಕ್ಕನ್ನು ಚಲಾಯಿಸಿ ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರವನ್ನು ಸದೃಢಗೊಳಿಸಬೇಕೆಂದು ನೈರುತ್ಯ ಶಿಕ್ಷಣ ಕ್ಷೇತ್ರದ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿ ನಂಜೇಶ್ ಬೆಣ್ಣೂರು ತಿಳಿಸಿದ್ದಾರೆ

ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು ನೈರುತ್ಯ ಶಿಕ್ಷಣ ಕ್ಷೇತ್ರದ ಚುನಾವಣೆಯಲ್ಲಿ ಕೇವಲ ಸರ್ಕಾರಿ ಶಾಲಾ ಶಿಕ್ಷಕರು ಮಾತ್ರ ಮತ ಚಲಾಯಿಸಬಹುದೆಂಬ ತಪ್ಪು ಕಲ್ಪನೆಯಿದ್ದು ಇದಕ್ಕಾಗಿ ಶಿಕ್ಷಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಕಳೆದ ೬ ವರ್ಷದಲ್ಲಿ ಕನಿಷ್ಠ ೩ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲ ರಾಗಿ, ಪ್ರಾಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರು ತ್ತಾರೊ ಅಥವಾ ಸಲ್ಲಿಸುತ್ತಿದ್ದಾರೊ ಅವರು ಮತ ಚಲಾಯಿಸಬಹು ದಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹೊರತುಪಡಿಸಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ (ಅನುದಾನ ರಹಿತ / ಸಹಿತ) ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಖಾಯಂ, ಅತಿಥಿ ಅಥವಾ ನಿವೃತ್ತ ವರ್ಗದ ಎಲ್ಲಾ ಶಿಕ್ಷಕರು ಮತ ಚಲಾಯಿಸಬಹುದಾಗಿದ್ದು ಇಂಜಿನಿ ಯರಿಂಗ್, ಮೆಡಿಕಲ್, ನರ್ಸಿಂಗ್ ಹಾಗೂ ಬಹುತೇಕ ಉನ್ನತ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯ ಬಹುತೇಕರು ಈ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ, ಅವರೂ ಕೂಡ ತಮ್ಮ ಮತದಾನದ ಹಕ್ಕು ಚಲಾಯಿಸಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸಹಕರಿಸುವಂತೆ ಕರೆ ನೀಡಿದರು.

ಶಿಕ್ಷಕರ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ಪ್ರದೇಶವಾರು ಇ.ಆರ್.ಒ ಗಳ ಮಾಹಿತಿ ನೀಡ ಲಾಗುವುದು ಆನಂತರದಲ್ಲಿ ಫಾರಂ ನಂ.೧೯ ಅನ್ನು ಭರ್ತಿ ಮಾಡಿ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದಕ್ಕೆ ಪುರಾವೆಯಾಗಿ ಅನುಭವ ಪತ್ರದೊಂದಿಗೆ ತಮ್ಮ ಹೆಸರನ್ನು ಶಿಕ್ಷಕರ ಮತದಾರರ ಪಟ್ಟಿಗೆ ಸೇರಿಸಬಹುದು ಎಂದರು.