ಮಡಿಕೇರಿ, ಸೆ. ೪: ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‌ನಲ್ಲಿ ನಿನ್ನೆ ಬೆಳಿಗ್ಗೆ ಗೂಳಿಗಳ ನಡುವೆ ಭಾರೀ ಕಾದಾಟ ನಡೆದಿತ್ತು. ರಸ್ತೆ ನಡುವೆ ಭಾರೀ ಗೂಳಿಗಳ ಈ ಕಾಳಗವನ್ನು ಬಿಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದ ಆಟೋ ಚಾಲಕರೊಬ್ಬರ ಮೇಲೆ ಗೂಳಿ ದಾಳಿ ನಡೆಸಿದ್ದು ಅವರು ಗಂಭೀರ ಸ್ವರೂಪದ ಪೆಟ್ಟಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಬೇಕಾದ ಘಟನೆ ನಡೆದಿದೆ.

ಗೂಳಿಗಳ ಕಾಳಗದ ನಡುವೆ ಎರಡು ದ್ವಿಚಕ್ರ ವಾಹನಗಳು ಜಖಂಗೊAಡಿವೆ. ಈ ಸಂದರ್ಭ ಆಟೋ ಚಾಲಕ ವಿಠಲ್ ಎಂಬವರು ಗೂಳಿಗಳ ಮೇಲೆ ನೀರು ಚೆಲ್ಲಿ ಅವುಗಳ ಗುದ್ದಾಟವನ್ನು

ಗೂಳಿ ಕಾಳಗ ಬಿಡಿಸಲು ಹೋಗಿ ವ್ಯಕ್ತಿ ಗಂಭೀರ

(ಮೊದಲ ಪುಟದಿಂದ) ಬಿಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಈ ಸಂದರ್ಭ ಗೂಳಿಯೊಂದು ಏಕಾಏಕಿ ವಿಠಲ್ ಅವರ ಮೇಲೆ ದಾಳಿ ನಡೆಸಿ ಅವರನ್ನು ಎತ್ತಿ ರಸ್ತೆಗೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದ ಗಂಭೀರ ಪೆಟ್ಟಾಗಿದ್ದ ವಿಠಲ್ ಅವರನ್ನು ಸಾರ್ವಜನಿಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಗೂಳಿಗಳ ತಿರುಗಾಟದಿಂದ ಜನರು ಅತಂಕಪಡುವAತಾಗಿದ್ದು ಇದನ್ನು ನಗರಸಭೆ ನಿಗ್ರಹಿಸಬೇಕೆಂದು ಆಗ್ರಹಿಸಿದ್ದಾರೆ.