ಮುಳ್ಳೂರು, ಸೆ. ೪: ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ವ್ಯಾಪ್ತಿಯ ನಾಲ್ಕು ವಿದ್ಯಾಸಂಸ್ಥೆಗಳಲ್ಲಿ ಒಂದೇ ಕಳ್ಳತನ ಯತ್ನ ನಡೆದಿದ್ದು, ಕಳ್ಳರಿಗೆ ಏನು ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಭಾನುವಾರ ರಾತ್ರಿ ಸಮೀಪದ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜುಗಳಲ್ಲಿ ಏಕ ಕಾಲಕ್ಕೆ ಸರಣಿ ಕಳ್ಳತನ ಪ್ರಕರಣ ನಡೆದಿದೆ.

ಭಾರತಿ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶಿಸಿದ ಕಳ್ಳರು ಪ್ರಾಂಶುಪಾಲರ ಕೊಠಡಿ, ವಿದ್ಯಾಸಂಸ್ಥೆಯ ಮುಖ್ಯ ಕಚೇರಿ ಹಾಗೂ ಸ್ಟೋರ್ ರೂಮ್ ಬಾಗಿಲಿನ ಬೀಗ ಒಡೆದು ಹಾಕಿದ್ದಾರೆ. ನಂತರ ಕೊಠಡಿಯೊಳಗೆ ನುಸುಳಿದ ಕಳ್ಳರು ಕಚೇರಿಯೊಳಗಿದ್ದ ಕೀಗೊಂಚಲನ್ನು ತೆಗೆದು ಗಾಡ್ರೇಜ್ ಬೀರುಗಳ ಬಾಗಿಲನ್ನು ತೆಗೆದು ಹಣ ಇಟ್ಟಿರಬಹುದೆಂದು ಹುಡುಕಾಟ ನಡೆಸಿ ಏನೂ ಸಿಗದೆ ಬರಿಗೈಯಲ್ಲಿ ಹಿಂತಿರುಗಿದ್ದಾರೆ.

ನAತರ ಕಳ್ಳರು ಪಕ್ಕದ ಪದವಿ ಪೂರ್ವ ಕಾಲೇಜಿನ ಮುಖ್ಯ ಕಚೇರಿಯ ಹಿಂಭಾಗದ ಕಿಟಿಕಿಯ ಬಾಗಿಲನ್ನು ತೆಗೆದು ಬಡಿಗೆಯ ಸಹಾಯದಿಂದ ಕಚೇರಿಯೊಳಗಿದ್ದ ಕೀಗೊಂಚಲನ್ನು ತೆಗೆದುಕೊಂಡು ಕಚೇರಿಯ ಬಾಗಿಲಿನ ಬೀಗ ತೆಗೆದು ಕಚೇರಿಯೊಳಗೆ ನುಗ್ಗಿದ್ದಾರೆ. ಅಲ್ಲಿ ಹುಡುಕಾಟ ನಡೆಸಿದ್ದಾರೆ ನಂತರ ಕೀಗೊಂಚಲನ್ನು ಪಕ್ಕದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಿಸಾಡಿ ಹೋಗಿದ್ದಾರೆ. ಕಳ್ಳರು ಪ್ರಥಮ ದರ್ಜೆ ಕಾಲೇಜು ಕೊಠಡಿಯ ಬಾಗಿಲಿನ ಬೀಗದ ಕೀ ಸೇರಿದಂತೆ ಗಾಡ್ರೇಜ್ ಬೀರುಗಳ

(ಮೊದಲ ಪುಟದಿಂದ) ಕೀಗೊಂಚಲುಗಳನ್ನು ಅಲ್ಲಲ್ಲಿ ಬಿಸಾಡಿ ಹೋಗಿದ್ದಾರೆ. ಸ್ಟೋರ್‌ರೋಮ್‌ನಲ್ಲಿದ್ದ ತಾಮ್ರದ ಜಾಗಟೆಯನ್ನು ಆವರಣದಲ್ಲಿ ಬಿಸಾಡಿ ಹೋಗಿದ್ದಾರೆ. ಕಳ್ಳರಿಗೆ ಯಾವುದೆ ನಗದು ಹಣ ಸಿಗದೆ ನಿರಾಸೆಯಿಂದ ಹಿಂತಿರುಗಿದ್ದಾರೆ.

ಸೋಮವಾರ ಬೆಳಗ್ಗೆ ವಿದ್ಯಾಸಂಸ್ಥೆ ಮುಖ್ಯಸ್ಥರು, ಸಿಬ್ಬಂದಿ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಶನಿವಾರಸಂತೆ ವೃತ್ತ ನಿರೀಕ್ಷಕ ಮಂಜುನಾಥ್, ಠಾಣಾಧಿಕಾರಿ ಗೋವಿಂದರಾಜ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮಡಿಕೇರಿ ಶ್ವಾನದಳ ಮತ್ತು ಬೆರಳಚ್ಚು ತಂಡದ ಸಿಬ್ಬಂದಿ ಹಾಗೂ ಬ್ರೋನ್ ಹೆಸರಿನ ಶ್ವಾನ ಇದರ ಸಹಾಯದಿಂದ ಸ್ಥಳ ಪರಿಶೀಲನೆ ನಡೆಸಿದರು.

ಕೊಡ್ಲಿಪೇಟೆಯಲ್ಲೂ ಯತ್ನ

ಭಾನುವಾರ ರಾತ್ರಿ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಕಾಲೇಜು ಪ್ರಾಂಶುಪಾಲರ ಕಚೇರಿ ಹಾಗೂ ವಿದ್ಯಾಸಂಸ್ಥೆಯ ಮುಖ್ಯ ಕಚೇರಿ ಬಾಗಿಲಿನ ಬೀಗ ಒಡೆದ ಕಳ್ಳರು ಕಚೇರಿಯೊಳಗಿದ್ದ ಕೀಗೊಂಚಲನ್ನು ತೆಗೆದು ಗಾಡ್ರೇಜ್ ಬಾಗಿಲನ್ನು ತೆಗೆದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಹಣ ನಗದಾಗಲಿ ಏನೂ ಸಿಗದ ಹಿನ್ನೆಲೆ ಕೀಗೊಂಚಲನ್ನು ಅಲ್ಲೆ ಬಿಟ್ಟು ಕಳ್ಳರು ವಾಪಾಸಾಗಿದ್ದಾರೆ.

ಪಕ್ಕದ ಬ್ಯಾಡಗೊಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಚೇರಿಯ ಬಾಗಿಲನ್ನು ಒಡೆದ ಕಳ್ಳರು ಗಾಡ್ರೇಜ್ ಬೀರನ್ನು ತೆಗೆದ ಕಳ್ಳರು ಹುಡುಕಾಟ ನಡೆಸಿ ಬೀರಿನಲ್ಲಿದ್ದ ಕಡತ ದಾಖಲಾತಿಗಳನ್ನು ಹರಡಿ ಹೋಗಿದ್ದಾರೆ. ಒಟ್ಟಿನಲ್ಲಿ ಭಾನುವಾರ ರಾತ್ರಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಶಿಕ್ಷಣ ಸಂಸ್ಥೆಗಳಲ್ಲಿ ಸರಣಿ ಕಳ್ಳತನ ಪ್ರಕರಣವಾಗಿದೆ ಈ ಎಲ್ಲಾ ಕಳ್ಳತನದ ಪ್ರಕರಣಗಳು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಈ ಸಂಬAಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.