ಶ್ರೀಮಂಗಲ, ಸೆ. ೪: ವ್ಯಕ್ತಿಯೊಬ್ಬರು ಎರಡು ಸುತ್ತಿನ ಗುಂಡು ಹಾರಿಸಿದ್ದರಿಂದ ನೆರೆ ಮನೆಯ ಅಂಗಳದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಯುವಕ ಸ್ವಲ್ಪದರಲ್ಲಿ ಪಾರಾಗಿದ್ದು, ತಪ್ಪಿದ ಗುಂಡು ಗೂಡಿನಲ್ಲಿದ್ದ ನಾಯಿಗಳಿಗೆ ತಗುಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಟಿ.ಶೆಟ್ಟಿಗೇರಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಗುಂಡೇಟಿನಿAದ ಒಂದು ಜರ್ಮನ್ ಶೇಫರ್ಡ್ ನಾಯಿ ತೀವ್ರವಾಗಿ ಗಾಯಗೊಂಡಿದೆ, ಇನ್ನೆರಡು ಡಾಬರ್ ಮೆನ್ ನಾಯಿಗಳಿಗೆ ಗಾಯಗಳಾಗಿವೆ.
ಟಿ.ಶೆಟ್ಟಿಗೇರಿ ಗ್ರಾಮದ ಪತ್ರಕರ್ತ ಹಾಗೂ ಗೋಣಿಕೊಪ್ಪದ ಉದ್ಯಮಿ ಮಚ್ಚಮಾಡ ಅನೀಶ್ ಮಾದಪ್ಪ ಅವರ ಪತ್ನಿ ಪಾರ್ವತಿ ಅವರು ಈ ಬಗ್ಗೆ ಗುತ್ತಿಗೆದಾರರಾಗಿರುವ ತಮ್ಮ ನೆರೆಮನೆಯ ಆಲೇಮಾಡ ಟಿ. ಶ್ರೀಮಂಗಲ, ಸೆ. ೪: ವ್ಯಕ್ತಿಯೊಬ್ಬರು ಎರಡು ಸುತ್ತಿನ ಗುಂಡು ಹಾರಿಸಿದ್ದರಿಂದ ನೆರೆ ಮನೆಯ ಅಂಗಳದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಯುವಕ ಸ್ವಲ್ಪದರಲ್ಲಿ ಪಾರಾಗಿದ್ದು, ತಪ್ಪಿದ ಗುಂಡು ಗೂಡಿನಲ್ಲಿದ್ದ ನಾಯಿಗಳಿಗೆ ತಗುಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಟಿ.ಶೆಟ್ಟಿಗೇರಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಗುಂಡೇಟಿನಿAದ ಒಂದು ಜರ್ಮನ್ ಶೇಫರ್ಡ್ ನಾಯಿ ತೀವ್ರವಾಗಿ ಗಾಯಗೊಂಡಿದೆ, ಇನ್ನೆರಡು ಡಾಬರ್ ಮೆನ್ ನಾಯಿಗಳಿಗೆ ಗಾಯಗಳಾಗಿವೆ.
ಟಿ.ಶೆಟ್ಟಿಗೇರಿ ಗ್ರಾಮದ ಪತ್ರಕರ್ತ ಹಾಗೂ ಗೋಣಿಕೊಪ್ಪದ ಉದ್ಯಮಿ ಮಚ್ಚಮಾಡ ಅನೀಶ್ ಮಾದಪ್ಪ ಅವರ ಪತ್ನಿ ಪಾರ್ವತಿ ಅವರು ಈ ಬಗ್ಗೆ ಗುತ್ತಿಗೆದಾರರಾಗಿರುವ ತಮ್ಮ ನೆರೆಮನೆಯ ಆಲೇಮಾಡ ಟಿ. ಶಬ್ದ ಕೇಳಿ ಬಂದಿದ್ದು ಆಯುಷ್ನ ಸಮೀಪದಲ್ಲಿಯೇ ಗುಂಡುಗಳು ಹಾದು ಹೋಗಿ ಸಮೀಪದಲ್ಲಿದ್ದ ಗೂಡಿನಲ್ಲಿದ್ದ ನಾಯಿಗಳಿಗೆ ಗುಂಡು ತಾಗಿದ್ದು ನಾಯಿಗಳು ಗಾಯಗೊಂಡು ನರಳಾಡುತ್ತಿರುವುದನ್ನು ನೋಡಿ ಆಘಾತಗೊಂಡು ಆಯುಷ್ ಸೈಕಲ್ನಿಂದ ಬಿದ್ದಿದ್ದಾನೆ. ಗುಂಡಿನ ಶಬ್ಧಕ್ಕೆ ಪಾರ್ವತಿ ಅವರು ಮನೆಯಿಂದ ಹೊರಬಂದು ನೋಡಿದಾಗ ಆರೋಪಿ ಸೋಮಣ್ಣ ಕಾಂಪೌAಡ್ ಸಮೀಪ ತೆರಳುತ್ತಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪಾರ್ವತಿ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಸೋಮವಾರ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕುಟ್ಟ ವೃತ್ತ ನೀರೀಕ್ಷಕ ಮಂಜಪ್ಪ, ಉಪ ನಿರೀಕ್ಷಕ ರವಿ ಶ್ರೀಮಂಗಲ ಎ.ಎಸ್.ಐ. ಸಾಲ್ದಾನ ಹಾಗೂ ತೀರ್ಥಕುಮಾರ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಎಫ್.ಎಸ್.ಎಲ್ ತಜ್ಞರು ಆಗಮಿಸಿ ಮಹಜರು ನಡೆಸಿದರು.
(ಮೊದಲ ಪುಟದಿಂದ)
ಪೊಲೀಸ್ ಪ್ರಕಟಣೆ: ಮುಂಜಾಗ್ರತ ಕ್ರಮವಾಗಿ ಸದರಿ ಬಂದೂಕನ್ನು ರದ್ದುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು, ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಗಾಯಗೊಂಡ ನಾಯಿಗಳಿಗೆ ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ.ಗಿರೀಶ್ ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಪಶು ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ.