ಸೋಮವಾರಪೇಟೆ, ಸೆ. ೨: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ಮೇಜರ್ ಧ್ಯಾನ್ಚಂದ್ ಅವರು ಎಲ್ಲಾ ಕ್ರೀಡಾಪಟುಗಳಿಗೂ ಸ್ಫೂರ್ತಿಯ ಕಿಡಿಯಾಗಿದ್ದಾರೆ ಎಂದು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬೆಳ್ಳಿಯಪ್ಪ ಹೇಳಿದರು.
ಸೋಮವಾರಪೇಟೆ ಬ್ಲೂ ಸ್ಟಾರ್ ಹಾಕಿ ಕ್ಲಬ್ ಆಶ್ರಯದಲ್ಲಿ ಜೂನಿಯರ್ ಕಾಲೇಜು ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಅಂರ್ರಾಷ್ಟಿçÃಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೇಜರ್ ಧ್ಯಾನ್ಚಂದ್ ಅವರು ಒಲಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ಅಪ್ರತಿಮ ಆಟಗಾರ. ಹಾಕಿ ಮಾಂತ್ರಿಕ ಎಂದೇ ಹೆಸರಾಗಿದ್ದ ಧ್ಯಾನ್ಚಂದ್ ಅವರು ಎಲ್ಲಾ ಕ್ರೀಡಾಪಟುಗಳಿಗೂ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳು ಕ್ರೀಡಾಭಿಮಾನದೊಂದಿಗೆ ದೇಶಾಭಿಮಾನವನ್ನೂ ಮೈಗೂಡಿಸಿ ಕೊಳ್ಳಬೇಕು. ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸುಸ್ಥಿತಿಗೆ ಸಹಕಾರಿಯಾಗಿವೆ ಎಂದು ಬೆಳ್ಳಿಯಪ್ಪ ಅವರು ಅಭಿಪ್ರಾಯಿ ಸಿದರು. ಕಾರ್ಯಕ್ರಮದಲ್ಲಿ ಬ್ಲೂ ಸ್ಟಾರ್ ಹಾಕಿ ಸಂಸ್ಥೆಯ ಅಧ್ಯಕ್ಷ ಯಶ್ವಂತ್, ಪದಾಧಿಕಾರಿಗಳಾದ ಬಿ.ಎಂ. ಸುರೇಶ್, ಬಿ.ಈ. ಅರುಣ್ ಕುಮಾರ್, ಅಭಿಷೇಕ್ ಗೋವಿಂದಪ್ಪ, ಶುಭಕರ್, ಪ್ರದೀಪ್, ತೇಜಸ್ವಿ, ಆರ್ಮಿ ಕೋಚ್ ಚಂದ್ರ ಕುಮಾರ್, ಪ್ರಮುಖರಾದ ಚಂದನ ಸುಬ್ರಮಣಿ, ಕಿಬ್ಬೆಟ್ಟ ಮಧು, ಪ್ರದಿ, ಓ.ಎಲ್.ವಿ. ಕಾನ್ವೆಂಟ್ನ ದೈಹಿಕ ಶಿಕ್ಷಣ ಶಿಕ್ಷಕ ಯುವರಂಜನ್ ಸೇರಿದಂತೆ ಹಾಕಿಪಟುಗಳು ಉಪಸ್ಥಿತರಿದ್ದರು.