ಮಡಿಕೇರಿ, ಸೆ. ೨: ಮೂರ್ನಾಡುವಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಉದ್ಯಮ ಮೇಳ ಆಯೋಜಿಸಲಾಗಿತ್ತು. ಕಚೇರಿ ಸಿಬ್ಬಂದಿಗಳಾದ ಕುಸುಮ ಮತ್ತು ಲೇಖ ಅವರು ಉದ್ಯಮ ಮೇಳವನ್ನು ಉದ್ಘಾಟಿಸಿದರು.

ಸಂಸ್ಥೆಯ ಪ್ರಾಥಮಿಕ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು. ಮನೆಯಲ್ಲೇ ತಯಾರಿಸಿದ ಹಲವಾರು ಬಗೆಯ ತಿಂಡಿತಿನಿಸುಗಳು, ಮನೆಯಲ್ಲೇ ಬೆಳೆದ ತರಕಾರಿ, ಹಣ್ಣುಹಂಪಲುಗಳು, ವಿವಿಧ ಬಗೆಯ ಸೊಪ್ಪುಗಳು, ಮಕ್ಕಳೇ ತಯಾರಿಸಿದ ಪಾನೀಯಗಳನ್ನು ಮಾರಾಟ ಮಾಡಿದರು.

ವಿದ್ಯಾಸಂಸ್ಥೆಯ ಇತರ ವಿದ್ಯಾರ್ಥಿಗಳು ಕೂಡ ಈ ಉದ್ಯಮ ಮೇಳದಲ್ಲಿ ಪಾಲ್ಗೊಂಡು ವ್ಯಾಪಾರ ವಹಿವಾಟಿನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ವಿದ್ಯಾಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.