ಮಡಿಕೇರಿ, ಆ. ೨೯: ಅಪಘಾತದಿಂದ ಹಾನಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಮೈಸೂರಿಗೆ ಇಂದು ಸ್ಥಳಾಂತರಿಸಲಾಯಿತು.
ತಾ. ೨೧ ರಂದು ನಡೆದ ಬಸ್ ಅಪಘಾತದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆ ಧರೆಗುರುಳಿ ಹಾನಿಯಾಗಿತ್ತು. ಈ ಹಿನ್ನೆಲೆ ಸಭೆ ನಡೆಸಿ ಪ್ರತಿಮೆಯನ್ನು ದುರಸ್ತಿಪಡಿಸುವಂತೆ ತೀರ್ಮಾನಿಸಿದ್ದ ಹಿನ್ನೆಲೆ ಇಂದು ಮೈಸೂರಿನ ಕಶ್ಯಪ ಶಿಲ್ಪಕಲಾ ನಿಕೇತನಕ್ಕೆ ಕಳುಹಿಸಲಾಯಿತು.