ಬೆಂಗಳೂರು, ಆ. ೨೯: ನಿನ್ನೆಯಷ್ಟೇ ಚಂದ್ರನಲ್ಲಿನ ಬೃಹತ್ ಗುಂಡಿ ಯೊಂದನ್ನು ತಪ್ಪಿಸಿ ಇತರ ಮಾರ್ಗದಲ್ಲಿ ಸುಲಲಿತವಾಗಿ ಸಂಚರಿಸಿದ ಪ್ರಗ್ಯಾನ್ ರೋವರ್, ಇಂದು ತನ್ನಲ್ಲಿ ಅಳವಡಿಸಿರುವ ಐIಃS(ಐಚಿseಡಿ-Iಟಿಜuಛಿeಜ ಃಡಿeಚಿಞಜoತಿಟಿ Sಠಿeಛಿಣಡಿosಛಿoಠಿe) ಮೂಲಕ ದಕ್ಷಿಣ ಧ್ರುವದ ಮಣ್ಣಿನಲ್ಲಿ ಸಲ್ಫರ್ ಪತ್ತೆ ಹಚ್ಚಿದೆ. ಇದರೊಂದಿಗೆ ಅಲ್ಯೂಮೀನಿಯಂ, ಕಾಲ್ಶಿಯಂ, ಕಬ್ಬಿಣ, ಕ್ರೋಮಿಯಂ, ಟೈಟೇನಿಯಂ, ಮ್ಯಾಂಗನೀಸ್, ಸಿಲಿಕಾನ್ ಹಾಗೂ ಆಮ್ಲಜನಕ ಅಂಶಗಳನ್ನು ಪತ್ತೆ ಹಚ್ಚಿದೆ. ಹೈಡ್ರೋಜನ್ ಪತ್ತೆಗೆ ಶೋಧ ನಡೆಸುತ್ತಿದೆ ಎಂಬದಾಗಿ ಇಸ್ರೋ ಮಾಹಿತಿ ಇತ್ತಿದೆ.