ಮಡಿಕೇರಿ, ಆ. ೨೯: ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಸಿಬ್ಬಂದಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ನಡೆದಿದೆ.

ಡಿಪೋದಲ್ಲಿ ಕಿರಿಯ ಸಹಾಯಕ ನಾಗಿದ್ದ ಅಭಿಷೇಕ್ (೨೪) ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ. ಈತನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಏನಿದು ಘಟನೆ?

ಅಭಿಷೇಕ್ ಅವರ ತಂದೆ ಮರ ಣದ ನಂತರ ಅನುಕಂಪದ ಆಧಾರ ದಲ್ಲಿ ಕಳೆದ ೩ ವರ್ಷಗಳಿಂದ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ೬ ತಿಂಗಳು ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಿ, ಕಳೆದ ೨.೫ ವರ್ಷಗಳಿಂದ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ. ಮೂಲತಃ ಹೆಬ್ಬಾಲೆ ನಿವಾಸಿ ಯಾಗಿರುವ ಅಭಿಷೇಕ್, ಮಡಿ ಕೇರಿಯ ಉಕ್ಕುಡದ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ವಾಸಿ ಸುತ್ತಿದ್ದ. ಮಂಗಳವಾರ ಬೆಳಿಗ್ಗೆ ಕರ್ತವ್ಯಕ್ಕೆಂದು ಬಂದ ಅಭಿಷೇಕ್ ಸಂಜೆ ೬ ಗಂಟೆ ವೇಳೆಯಲ್ಲಿ ಡಿಪೋ ವ್ಯವಸ್ಥಾಪಕಿ ಗೀತಾ ಅವರೊಂದಿಗೆ ತನಗೆ ನೀವು ಕಿರುಕುಳ ನೀಡುತ್ತಿದ್ದೀರ. ಇದರಿಂದ ತನಗೆ ಮಾನಸಿಕ ಹಿಂಸೆ ಆಗುತ್ತಿದೆ ಎಂದು ಜೋರು ಮಾತು ಕತೆ ನಡೆದು ವಾಗ್ವಾದಕ್ಕೆ ತಿರುಗಿದೆ.

ಇದೇ ಸಂದರ್ಭ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರಶೆಟ್ಟಿ ತಾ. ೩೦ ರಂದು ಮೈಸೂರಿನಲ್ಲಿ ನಡೆಯಲಿರುವ ಗೃಹಲಕ್ಷಿö್ಮ ಕಾರ್ಯಕ್ರಮಕ್ಕೆ ಬಸ್ ವ್ಯವಸ್ಥೆ ಕುರಿತು ಪರಿಶೀಲಿಸಲು ಆಗಮಿಸಿದ್ದಾರೆ. ಅವರ ಬಳಿಯೂ ವಿಷಯವನ್ನು ಅಭಿಷೇಕ್ ಪ್ರಸ್ತಾಪಿಸಿ ಅನಂತರ ಜೇಬಿನಲ್ಲಿದ್ದ ವಿಷದ ಬಾಟಲ್ ತೆಗೆದು ಅಧಿಕಾರಿಗಳ ಎದುರು ಸೇವಿಸಿದ್ದಾನೆ. ಕುಸಿದು ಬಿದ್ದ ಅಭಿಷೇಕ್‌ನನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಯಿತು.

ವ್ಯವಸ್ಥಾಪಕಿ ವಿರುದ್ಧ ಆಕ್ರೋಶ

ಡಿಪೋ ವ್ಯವಸ್ಥಾಪಕಿ ಗೀತಾ ಕೆಲವು ಸಿಬ್ಬಂದಿಗಳನ್ನು ಗುರಿ ಮಾಡಿ ಒತ್ತಡ ತಂದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ಸಿಬ್ಬಂದಿಗಳು ಮಾಧ್ಯಮದ ಎದುರು ಅಳಲು ತೋಡಿಕೊಂಡರು. ವರ್ಗಾವಣೆಯಾಗಿ ಹಲವು ದಿನಗಳು ಕಳೆದರು ಗೀತಾ ಬಿಡುಗಡೆಯಾ ಗುತ್ತಿಲ್ಲ. ಹಲವು ಸಿಬ್ಬಂದಿಗಳಿಗೆ ಇವರಿಂದ ಕಿರುಕುಳವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಅಭಿಷೇಕ್ ತಾಯಿ ಹೇಮಾವತಿ, ಹಲವು ಸಮಯದಿಂದ ಕೆಲಸದ ಒತ್ತಡ ನೀಡುತ್ತಿರುವ ಬಗ್ಗೆ ತನ್ನ ಬಳಿ ಹೇಳಿಕೊಂಡಿದ್ದ. ಪರಿಣಾಮ ‘ಡಿಪ್ರೆಷನ್’ಗೂ ಹೋಗಿದ್ದ. ಆ ಸಂದರ್ಭ ಬೇಕಾದ್ದಲ್ಲಿ ಕೆಲಸ ಬಿಡುವಂತೆಯೂ ಸಲಹೆ ನೀಡಿದ್ದೆ. ಆದರೆ, ಸಹಿಸಿಕೊಂಡು ಕೆಲಸ ಮಾಡುತ್ತಿದ್ದ. ಇಂದು ಅಭಿಷೇಕ್ ಅವರ ಚಿಕ್ಕಪ್ಪ ಮೃತಪಟ್ಟಿದ್ದಾರೆ. ಕೆಲಸದ ಒತ್ತಡದಿಂದ ಸಾವಿಗೂ ಬರುವುದಿಲ್ಲ ಎಂದು ಕೆಲಸಕ್ಕೆ ಹೋಗಿದ್ದ. ಇದೀಗ ಅಧಿಕಾರಿ ಹಿಂಸೆಯಿAದ ಸಾವಿಗೆ ಯತ್ನಿಸಿದ್ದಾನೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಟಾರ್ಗೆಟ್ ಮಾಡಿಲ್ಲ

ವೈಯಕ್ತಿಕವಾಗಿ ಸಿಬ್ಬಂದಿಗಳನ್ನು ಅಧಿಕಾರಿ ಗುರಿ ಮಾಡಿರಲಿಲ್ಲ. ಕೆಲಸವನ್ನು ಹೇಳುತ್ತಿದ್ದರು ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾ ಧಿಕಾರಿ ಜಯಕರಶೆಟ್ಟಿ ಸಿಬ್ಬಂದಿಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ತನ್ನ ಜೊತೆಯೂ ಈ ಬಗ್ಗೆ ಅಭಿಷೇಕ್ ಹೇಳಿಕೊಂಡ ಆ ಸಂದರ್ಭ ಮೇಲಧಿಕಾರಿಗೆ ದೂರು ನೀಡುವಂತೆ ಸಲಹೆ ನೀಡಿದ್ದೆ. ಮಾಹಿತಿಯ ಪ್ರಕಾರ ಅವರಿಗೆ ವೈಯಕ್ತಿಕವಾಗಿ ಒತ್ತಡ ತರುತ್ತಿರಲಿಲ್ಲ. ಇರುವ ಕೆಲಸವನ್ನು ಮಾಡುವಂತೆ ಹೇಳುತ್ತಿದ್ದರು ಎಂದು ತಿಳಿಸಿದ ಅವರು, ಅಭಿಷೇಕ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ೨-೩ ದಿನಗಳ ಕಾಲ ನಿಗಾದಲ್ಲಿಡಲು ವೈದ್ಯರು ಸೂಚಿಸಿ ದ್ದಾರೆ ಎಂದರು. ವರ್ಗಾವಣೆ ಆದರೂ ಬಿಡುಗಡೆಗೊಂಡಿಲ್ಲದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಯಕರ್, ಇವರ ಸ್ಥಾನಕ್ಕೆ ಬೇರೆ ಅಧಿಕಾರಿ ಬಾರದ ಕಾರಣ ಬಿಡುಗಡೆಗೊಂಡಿಲ್ಲ. ಸ್ಥಾನಕ್ಕೆ ಬೇರೆಯವರು ಬಂದ ತಕ್ಷಣ ಬಿಡುಗಡೆಗೊಳ್ಳುತ್ತಾರೆ ಎಂದರು.