ಮಡಿಕೇರಿ, ಆ. ೨೮ : ಕೊಡಗಿನ ಅಭಿವೃದ್ಧಿ ಹಾಗೂ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರದ ಪರ ಮುಂದಿನ ಹೆಜ್ಜೆಯಿರಿಸಲಿರುವದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಭರವಸೆಯಿತ್ತರು. ಇಂದು ಮಡಿಕೇರಿಯಲ್ಲಿ “ಶಕ್ತಿ”ಯೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.

ಇದುವರೆಗೆ ರಾಜ್ಯ ಸರಕಾರದ ಗ್ಯಾರಂಟಿಗಳ ಜಾರಿಗೆ ಸರಕಾರÀ ಗಮನ ಹರಿಸಿ ಯಶಸ್ವಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ- ಸಮಸ್ಯೆಗಳ ಪರಿಹಾರದ ಕುರಿತು ಗಮನ ಹರಿಸಲಾಗುತ್ತದೆ. ಈಗಷ್ಟೇ ನಮ್ಮ ಸರಕಾರ ಶತ ದಿನಗಳನ್ನು ಪೂರ್ಣಗೊಳಿಸುತ್ತಿದೆ ಎಂದರು.

ಮಡಿಕೇರಿ, ಗೋಣಿಕೊಪ್ಪಲು ದಸರಾ ಹಾಗೂ ಕಾವೇರಿ ಸಂಕ್ರಮಣ ಆಚರಣೆಗಳ ಬಗ್ಗೆಯೂ ಸಭೆ ನಡೆಸಿ ಸಿದ್ಧತೆ ಕೈಗೊಳ್ಳಲಾಗುತ್ತ್ತದೆ. ಸರಕಾರದಿಂದ ಸೂಕ್ತ ಅನುದಾನ ನೀಡಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನೇಕ ಕಾಮಗಾರಿ ಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಪ್ರಶ್ನೆಗೆ ಸರಕಾರ ರಚನೆಗೊಂಡ ಪ್ರಾರಂಭದಲ್ಲಿ ಕಾಮಗಾರಿಯ ಪರಿಶೀಲನೆ ಬಳಿಕ ಮುಂದುವರಿಸಲು ನಿರ್ಧರಿಸಲಾಗಿತ್ತು. ಇದೀಗ ಕಾಮಗಾರಿಗಳು ಮುಂದುವರಿಯುತ್ತಿವೆೆ ಎಂದರು. ಮಡಿಕೇರಿ ತಾಲೂಕು ಕಚೇರಿ, ಕಲಾಭವನ, ಭಾಗಮಂಡಲ ಮೇಲ್ಸೇತುವೆ ನಿರ್ಮಾಣಗಳು ವಿಳಂಬಗೊAಡಿರುವ ಬಗ್ಗೆ ಗಮನಕ್ಕೆ ತಂದಾಗ ಈ ಕುರಿತು ಗಮನಹರಿಸುವುದಾಗಿ ತಿಳಿಸಿದರು. ಅಲ್ಲದೆ, ದಸರಾ ಸಂದರ್ಭ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಲಕಾವೇರಿ-ಭಾಗಮಂಡಲ, ಓಂಕಾರೇಶ್ವರ ದೇವಾಲಯ ಮೊದಲಾದ ಮುಜರಾಯಿ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಕುರಿತು ಪ್ರಸ್ತಾಪಿಸಿದಾಗ ಸದ್ಯದಲ್ಲಿಯೇ ಪ್ರಕ್ರ‍್ರಿಯೆ ಪ್ರಾರಂಭಿಸಲಿರುವುದಾಗಿ ಮಾಹಿತಿಯಿತ್ತರು. ಮಡಿಕೇರಿಯ ಗ್ರೇಟರ್ ರಾಜಾಸೀಟಿನ ಬಾಕಿಯಾದ ಕೆಲಸ, ಜಿಲ್ಲಾಡಳಿತ ಭವನದ ತಡೆಗೋಡೆ ಕಾಮಗಾರಿಗಳನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಖಚಿತಪಡಿಸಿದರು.

ಬರಪೀಡಿತ ತಾಲೂಕು

ಬರಪೀಡಿತ ತಾಲೂಕುಗಳ ಪರಿಗಣನೆಗೆ ಸಂಬAಧಿಸಿದAತೆ ಕೊಡಗು ಜಿಲ್ಲೆಯ ತಾಲೂಕುಗಳನ್ನು ಪರಿಗಣಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಲು ಕೆಲವು ಮಾನದಂಡಗಳೊAದಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕೋಸ್ಕರ ಸಚಿವ ಸಂಪುಟ ಉಪಸಮಿತಿಯಿದ್ದು ಈ ಸಮಿತಿಯು ರಾಜ್ಯದ ಆಯಾ ತಾಲೂಕಿನ ಮಳೆಯ ಕೊರತೆ, ಕೃಷಿ ಪ್ರಗತಿಯ ಪ್ರಮಾಣ ಇತ್ಯಾದಿ

(ಮೊದಲ ಪುಟದಿಂದ) ಪರಿಶೀಲಿಸಿ ನಿರ್ಧಾರಕ್ಕೆ ಬರುತ್ತದೆÉ. ಅಲ್ಲದೆ, ಕೇಂದ್ರ ಸರಕಾರದ ನಿಯಮವನ್ನೂ ಪಾಲಿಸಬೇಕಾಗಿದೆ. ಅಂತಿಮ ವರದಿಯನ್ನು ಆಧರಿಸಿ ಯಾವ್ಯಾವ ತಾಲೂಕುಗಳು ಬರ ಪೀಡಿತವೆಂದು ಘೋಷಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಶಾಸಕರಿಗೆÀ ನೀಡುವ ಅನುದಾನ ನಿಲ್ಲಿಸಿರುವ ಕುರಿತು ಪ್ರಶ್ನಿಸಿದಾಗ ನಿರಾಕರಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಯವರು ಎಲ್ಲ ಶಾಸಕರಿಗೆ ತಲಾ ರೂ. ೫೦ ಲಕ್ಷ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಹಂತ ಹಂತವಾಗಿ ತಲಾ ಒಟ್ಟು ರೂ. ೨ ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಆನೆ ಧಾಳಿ ಕುರಿತು

ಆನೆ ಹಾವಳಿ ತಡೆಯಲು ಅರಣ್ಯ ಸಚಿವರು ಈಗಾಗಲೇ ಜಿಲ್ಲೆಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದ್ದಾರೆ. ತೊಂದರೆ ನೀಡುತ್ತಿರುವÀ ಸಲಗಗÀಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆÉ ನಿರ್ದೇಶನ ನೀಡಲಾಗಿದೆ., ಮುಂದೆ ರಾಜ್ಯದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಆನೆ ಮಾನವ ಸಂಘ಼ರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದು, ಈಗಾಗಲೇ ಆನೆ ಧಾಳಿಯಿಂದ ಬೆಳೆ ನಷ್ಟ ಪ್ರಕರಣಗಳನ್ನು ಸಮೀಕ್ಷಿಸುವಂತೆ ತಿಳಿಸಲಾಗಿದೆ. ಬಳಿಕ ಕೊಡಗಿನ ಶಾಸಕರುಗಳೊಂದಿಗೆ ಚರ್ಚಿಸಿ ಆನೆ ಧಾಳಿಯಿಂದ ಸಂಭವಿಸಿದ ಬೆಳೆ ನಷ್ಟಕ್ಕೆ ಪರಿಹಾರ ಕಲ್ಪಿಸಲಾಗುವುದು ಎಂದರು.

ಕುಶಾಲನಗರದಲ್ಲಿ ಮಳೆಗಾಲದ ಸಂದರ್ಭ ಪ್ರವಾಹ ತಡೆಯಲು ನಡೆಸಿರುವ ಕೆಲಸ ಅಪೂರ್ಣವಾಗಿದೆ. ಅವೈಜ್ಞಾನಿಕವಾಗಿದೆ. ಈ ಬಗ್ಗೆ ಸೂಕ್ತ ತಾಂತ್ರಿಕ ನಕ್ಷೆ ರೂಪಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಬಳಿಕ ಅಗತ್ಯ ಕ್ರಮ ಕೈಗೊಂಡು ಕಾಮ ಗಾರಿಯನ್ನು ಪೂರ್ಣ ಗೊಳಿಸಲಾಗು ವುದು ಎಂದರು. ಈಗಾಗಲೇ ಗುರುತಿಸಿರುವ ಸ್ಥಳಗಳಲ್ಲಿ ಕೊಡಗಿನಲ್ಲಿ ಪ್ರವಾಹ ತಡೆಯಲು ತಡೆಗೋಡೆ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದರು.