ಮಡಿಕೇರಿ, ಆ. ೨೮: ಚೀನಾದ ಹ್ಯಾಂಗ್ಝೌನಲ್ಲಿ ಸೆ.೨೩ರಿಂದ ನಡೆಯಲಿರುವ ಏಷ್ಯನ್ಗೇಮ್ಸ್ನಲ್ಲಿ ಕೊಡಗು ಜಿಲ್ಲೆಯವರಾದ ಆರು ಕ್ರೀಡಾಪಟುಗಳು ಭಾಗವಹಿಸುತ್ತಿರುವ ಹೆಮ್ಮೆ ಒಂದೆಡೆಯಾಗಿದೆ. ಈ ಆರು ಕ್ರೀಡಾಪಟುಗಳು ಮಾತ್ರವಲ್ಲದೆ, ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಕೂಡ ಕೊಡಗಿನವರೇ ಆದ ಚೇನಂಡ ಸಿ. ಕುಟ್ಟಪ್ಪ (ವಿಶು) ಅವರು ಪಾಲ್ಗೊಳ್ಳುತ್ತಿದ್ದಾರೆ. ಭಾರತ ಬಾಕ್ಸಿಂಗ್ ತಂಡದ ಪುರುಷರು ಹಾಗೂ ಮಹಿಳಾ ಸ್ಪರ್ಧಿಗಳನ್ನು ಒಳಗೊಂಡ ತಂಡಕ್ಕೆ ಮುಖ್ಯ ಕೋಚ್ ಆಗಿ ಚೇನಂಡ ಸಿ. ಕುಟ್ಟಪ್ಪ ಅವರನ್ನು ನೇಮಕ ಮಾಡಲಾಗಿದೆ. ಭಾರತ ಕ್ರೀಡಾ ಸಚಿವಾಲಯ ಪ್ರಕಟಿಸಿರುವ ಪಟ್ಟಿಯಲ್ಲಿ ಕೊಡಗಿನ ಆರು ಕ್ರೀಡಾಪಟುಗಳಾದ ಅಶ್ವಿನಿ ಪೊನ್ನಪ್ಪ, ಜೋಶ್ನಾ ಚಿಣ್ಣಪ್ಪ,
(ಮೊದಲ ಪುಟದಿಂದ) ರೋಹನ್ ಬೋಪಣ್ಣ, ಅಪ್ಪಚಂಗಡ ಬೆಳ್ಯಪ್ಪ, ಕೇಳಪಂಡ ಗಣಪತಿ, ತೀತರಮಾಡ ಸಿಂಚಲ್ ಕಾವೇರಮ್ಮ ಹಾಗೂ ಇವರೊಂದಿಗೆ ಕುಟ್ಟಪ್ಪ ಅವರೂ ಸೇರಿ ಕೊಡಗಿನವರ ಸಂಖ್ಯೆ ಏಳರಷ್ಟಿದೆ.
ಏಷ್ಯನ್ಗೇಮ್ಸ್ನಲ್ಲಿ ಪುಟ್ಟ ಜಿಲ್ಲೆಯಾದ ಕೊಡಗಿನಿಂದ ಒಟ್ಟು ೭ ಮಂದಿ ಪಾಲ್ಗೊಳ್ಳುತ್ತಿರುವುದು ಏಷ್ಯನ್ಗೇಮ್ಸ್ನಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಮಹತ್ವದ್ದಾಗಿದ್ದು, ಈ ಬಗ್ಗೆ ಹಲವು ಹಿರಿಯ ಕ್ರೀಡಾಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ. ಏಷ್ಯನ್ಗೇಮ್ಸ್ನಲ್ಲಿ ಈ ಹಿಂದೆ ಪಾಲ್ಗೊಂಡಿರುವ ಕ್ರೀಡಾತಾರೆಗಳಾದ ಮಾಜಿ ಒಲಂಪಿಯನ್ ಡಾ|| ಎ.ಬಿ. ಸುಬ್ಬಯ್ಯ, ಬೊಳ್ಳಂಡ ಪ್ರಮೀಳಾ ಅಯ್ಯಪ್ಪ ಹಾಗೂ ಈ ಬಾರಿ ಆಯ್ಕೆಯಾಗಿರುವ ಸಿಂಚಲ್ ಕಾವೇರಮ್ಮ ಅವರ ಕೋಚ್ ಆಗಿರುವ ಅಂತರರಾಷ್ಟಿçÃಯ ಅಥ್ಲೆಟಿಕ್ಸ್ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಅವರುಗಳು ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ.