ಮಡಿಕೇರಿ, ಆ. ೨೯: ಇಂದು ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಆಶ್ರಯದಲ್ಲಿ ಋಗ್ವೇದ ಉಪಾಕರ್ಮ ವನ್ನು ಆಚರಿಸಲಾಯಿತು. ಯಜ್ಞೋಪವೀತ ಹೊಸ ಪವಿತ್ರ ದಾರವಾಗಿದೆ. ಈ ಪವಿತ್ರ ದಾರ (ಜನಿವಾರವನ್ನು) ಇಂದು ಉಪಾಕರ್ಮ ಹೋಮ ಹಾಗೂ ಸಪ್ತ ಋಷಿಗಳ ವಿಶೇಷ ಪೂಜೆಯ ಬಳಿಕ ಸಾಮೂಹಿಕವಾಗಿ ಧರಿಸಲಾಯಿತು. ಅಲ್ಲದೆ ಋಷಿಗಳಿಗೆ ಮತ್ತು ಗತಿಸಿದ ಪಿತೃಗಳಿಗೆ ತರ್ಪಣವನ್ನು ಭಕ್ತಿ ಪೂರ್ವಕವಾಗಿ ಅರ್ಪಿಸಲಾಯಿತು. ಇದನ್ನು ಕೆಲವೆಡೆ ನೂಲ ಹುಣ್ಣಿಮೆಯಂತಲೂ ಕರೆಯುತ್ತಾರೆ. ಉಪಾಕರ್ಮವನ್ನು ವರ್ಷಕ್ಕೆ ಒಂದು ಬಾರಿ ಶ್ರವಣ/ಧನಿಷ್ಟ ನಕ್ಷತ್ರಗಳಲ್ಲಿ ಆಚರಿಸಲಾಗುತ್ತದೆ. ಶಾಸ್ತೊçÃಕ್ತವಾಗಿ ಜನಿವಾರವನ್ನು ಬದಲಾಯಿಸುತ್ತಾರೆ.

ಪುರೋಹಿತರಾದ ವಿಠಲ ಭಟ್ ಹೋಮ ಪೂಜಾದಿಗಳನ್ನು ನೆರವೇರಿಸಿದರು. ಈ ಸಂದರ್ಭ ನಿಧಿಯ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಅರುಣ್ ಸೋಮಯಾಜಿ ಮೊದಲಾದವರು ಉಪಸ್ಥಿತರಿದ್ದರು. ಬುಧವಾರ ದಿನ ಬೆಳಿಗ್ಗೆ ೭.೩೦ಕ್ಕೆ ಯಜುರುಪಾಕರ್ಮ ನಿಧಿಯ ಆಶ್ರಯದಲ್ಲಿ ನಡೆಯಲಿದೆ.

ರಾಘವೇಂದ್ರ ಆರಾಧನೆ

ಸೆಪ್ಟೆಂಬರ್ ೧ ರಂದು ಸಾಯಂಕಾಲ ೬ ಗಂಟೆಯಿAದ ೭.೧೫ ರ ವರೆಗೆ ನಿಧಿಯ ಶತಮಾನ ಭವನದಲ್ಲಿ ಶ್ರೀ ರಾಘವೇಂದ್ರ ಆರಾಧನಾ ಮಹೋತ್ಸವ ಮತ್ತು ವರಮಹಾಲಕ್ಷಿö್ಮÃ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಭಕ್ತಿ ಸಂಗೀತ ಸುಧೆ ಶ್ರೀಮತಿ ವೀಣಾ ಹೊಳ್ಳರವರ ನೇತೃತ್ವದಲ್ಲಿ ಸಂಪನ್ನಗೊಳ್ಳಲಿದೆ. ಸಮಾಜದ ಕಾರ್ಯದಲ್ಲಿ ಭಾಗಿಗಳಾಗಬೇಕಾಗಿ ನಿಧಿ ಆಡಳಿತ ಮಂಡಳಿ ಕೋರಿದೆ.