ವೀರಾಜಪೇಟೆ, ಆ. ೨೭: ವೀರಾಜಪೇಟೆ ಸಮೀಪದ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದ ಪೂಜಾ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಶ್ರಾವಣ ಮಾಸದ ಅಂಗವಾಗಿ ತಾ. ೧೯ರ ಮೊದಲ ಶ್ರಾವಣ ಶನಿವಾರ ಬೆಳಿಗ್ಗೆ ೭ ಗಂಟೆಯಿAದ ದೇವರಿಗೆ ಗಣಪತಿ ಹೋಮದ ಬಳಿಕ ಶನೀಶ್ವರ ಮತ್ತು ನವಗ್ರಹ ದೇವರಿಗೆ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.