*ಗೋಣಿಕೊಪ್ಪ, ಆ. ೨೭: ಕರ್ನಾಟಕ ನಾಯರ್ ಸೊಸೈಟಿಯ ಗೋಣಿಕೊಪ್ಪ ಕರಯೋಗಂ, ಶ್ರೀಲಕ್ಷಿö್ಮ ಮಹಿಳಾ ವಿಭಾಗಂ ಮಹಾಸಭೆ ಪ್ರಕಾಶ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ನಾಯರ್ ಸೊಸೈಟಿಯ ಗೋಣಿಕೊಪ್ಪ ಕರಯೋಗಂ ಅಧ್ಯಕ್ಷ ಪಿ.ಜಿ. ಪವಿತ್ರನ್ ಅಧ್ಯಕ್ಷತೆಯಲ್ಲಿ ನಡೆಯಿತು. ೨೦೨೨-೨೩ನೇ ಸಾಲಿನ ವಾರ್ಷಿಕ ವರದಿ ಓದಲಾಯಿತು.
ಮಹಿಳೆಯರಿಗೆ ನಡೆದ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಸರಳ ಮಣಿಲಾಲ್ ಪ್ರಥಮ, ಶ್ರೀಜಾ ವೇಣುಗೋಪಾಲನ್ ದ್ವಿತೀಯ, ಗೀತಾ ವಿಜಯನ್ ತೃತೀಯ ಸ್ಥಾನ ಪಡೆದರು. ಶ್ರೀಜಾ ವೇಣುಗೋಪಾಲ್ ಸ್ವಾಗತ ನೃತ್ಯ ಮಾಡಿದರು.
ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತ ನಂದಾಜಿ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರ ಪೋಷಣೆಗೆ ಕುಟುಂಬ ಪದ್ಧತಿ ಮುಖ್ಯವಾಗಿದೆ. ಮಹಿಳೆಯರು ಕೂಡ ಸಂಘ-ಸAಸ್ಥೆಗಳ ಮೂಲಕ ಪಾಲ್ಗೊಂಡು ಸೇವೆ ನಡೆಸುತ್ತಿರುವುದು ಸ್ವಾಗತಾರ್ಹ. ಕುಟುಂಬದೊAದಿಗೆ ಸಂಘಟನೆಗೂ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ಬೆಂಗಳೂರು ಕರಯೋಗಂ ಕಾರ್ಯದರ್ಶಿ ಎಂ. ಮನೋಹರ ಕುರುಪ್, ಉಪಾಧ್ಯಕ್ಷರಾದ ವಿ.ಆರ್. ಚಂದ್ರನ್, ಡಾ. ಮೋಹನ ಚಂದ್ರನ್, ಜಂಟಿ ಕಾರ್ಯದರ್ಶಿ ಸಿ. ವೇಣುಗೋಪಾಲನ್, ಗೋಣಿಕೊಪ್ಪ ಕರಯೋಗಂ ಕಾರ್ಯದರ್ಶಿ ಕೆ. ವೇಣುಗೋಪಾಲ್ ಮೆನನ್, ಖಜಾಂಚಿ ಎಂ. ಲೋಹಿತಾಕ್ಷನ್, ಶ್ರೀಲಕ್ಷಿö್ಮ ಮಹಿಳಾ ವಿಭಾಗಂ ಅಧ್ಯಕ್ಷೆ ಜಯಶ್ರೀ ಸಂಜೀವನ್, ಕಾರ್ಯದರ್ಶಿ ಲಿನಿಶಾ ಉಣ್ಣಿಕೃಷ್ಣನ್, ಖಜಾಂಚಿ ಗೀತಾ ವಿಜಯಕುಮಾರ್ ಇದ್ದರು. ಆಕಾಶ್ ಮೆನನ್ ನಿರೂಪಿಸಿದರು.