ಶನಿವಾರಸಂತೆ, ಆ. ೨೭: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಿಡ್ತ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವತಿಯಿಂದ ರೂ. ೨೦ ಸಾವಿರ ಮೌಲ್ಯದ ಬ್ಯಾಂಡ್ ಸೆಟ್ ಸಲಕರಣೆಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕೊಡುಗೆ ವಿತರಿಸಿದ ಸಹಕಾರ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಚಟುವಟಿಗಳಲ್ಲೂ ಆಸಕ್ತಿ ತೋರಬೇಕು. ರಾಷ್ಟಿçÃಯ ಹಬ್ಬಗಳು, ಮತ್ತಿತರ ಸಮಾರಂಭಗಳಲ್ಲಿ ಬ್ಯಾಂಡ್ ಸೆಟ್ ಸಲಕರಣೆಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾಸAಸ್ಥೆ ಅಧ್ಯಕ್ಷ ಕೆ.ಎಂ. ಜಗನ್ ಪಾಲ್, ಕಾರ್ಯದರ್ಶಿ ಎನ್.ಕೆ. ಅಪ್ಪಸ್ವಾಮಿ, ಖಜಾಂಚಿ ಬಿ.ಕೆ. ಚಿಣ್ಣಪ್ಪ, ನಿರ್ದೇಶಕರಾದ ರಂಗಸ್ವಾಮಿ, ಮಹಮ್ಮದ್ ಪಾಷ, ಪಿಯು ಕಾಲೇಜು ಪ್ರಾಂಶುಪಾಲ ಅಶೋಕ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಪಿ. ನರಸಿಂಹಮೂರ್ತಿ, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.