ಮಡಿಕೇರಿ, ಆ. ೨೬ : ಚೆನ್ನೆöÊಯಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಮುರುಗಪ್ಪ ಗೋಲ್ಡ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ತಂಡವೂ ಪಾಲ್ಗೊಂಡಿದೆ. ದೇಶದ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯಲ್ಲಿ ಮುರುಗಪ್ಪ ಕಪ್ ಕೂಡ ಒಂದಾಗಿದ್ದು, ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ೧೦ ಆಟಗಾರರು ಪಾಲ್ಗೊಂಡಿದ್ದಾರೆ. ತಂಡದ ಮುಖ್ಯ ಕೋಚ್ ಹಾಗೂ ಕೋಚ್ ಕೂಡ ಜಿಲ್ಲ್ಲೆಯವರೇ ಆಗಿದ್ದು ಕೊಡಗಿನ ಒಟ್ಟು ೧೨ ಮಂದಿ ಹಾಕಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ತಂಡದ ನಾಯಕನಾಗಿ ಮಾಜಿ ಒಲಂಪಿಯನ್ ನಿಕಿನ್ ತಿಮ್ಮಯ್ಯ ಅವರಿದ್ದು ಇತರ ಆಟಗಾರರಾಗಿ ಮಾಜಿ ಒಲಂಪಿಯನ್ ಎಸ್.ವಿ. ಸುನಿಲ್, ಎಂ.ಬಿ. ಅಯ್ಯಪ್ಪ, ಶಾನ್ ಮೊಣ್ಣಪ್ಪ ಎಂ.ಎ., ದೀಕ್ಷಿತ್ ಎ.ಎಚ್., ತ್ರಿಶೂಲ್ ಗಣಪತಿ, ಲಿಖಿತ್ ಬಿ.ಎಂ. ಯತೀಶ್ ಕುಮಾರ್, ಚೆಲ್ಸಾ ಮೇದಪ್ಪ, ಸಾತ್ವಿಕ್ ಹೆಚ್.ಆರ್. ಅವರುಗಳು ಪಾಲ್ಗೊಂಡಿದ್ದಾರೆ. ತಂಡದ ಮುಖ್ಯ ಕೋಚ್ ಆಗಿ ಮಾಜಿ ಅಂತರರಾಷ್ಟಿçÃಯ ಆಟಗಾರ ವಿ.ಎಸ್. ವಿನಯ್ ಹಾಗೂ ಕೋಚ್ ಆಗಿ ಕೆ.ಎಂ. ಸೋಮಣ್ಣ ಪಾಲ್ಗೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಹಾಕಿ ಕರ್ನಾಟಕ ರೈಲ್ವೇಸ್ ಎದುರು ಡ್ರಾ ಸಾಧಿಸಿದೆ.