ಕಡಂಗ, ಆ. ೨೬: ಇತಿಹಾಸ ಪ್ರಸಿದ್ಧವಾದ ಕಕ್ಕಬ್ಬೆ ಸಮೀಪದ ಕುಂಜಿಲ ಪೈನರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರ ಹೆಸರಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ ೨೦೨೪ನೇ ಸಾಲಿನ ಫೆಬ್ರವರಿ ೨೩ ರಿಂದ ೨೭ರ ವರೆಗೆ ನಡೆಸಲಾಗುತ್ತದೆ ಎಂದು ಅಧ್ಯಕ್ಷರಾದ ಶೌಕತ್ ಮಕ್ಕಿ ಮತ್ತು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.