ನಾಪೋಕ್ಲು, ಆ. ೨೬: ಕೆಎಸ್‌ಆರ್‌ಪಿ ಮುಖ್ಯ ಪೇದೆ ಕೊಡಗು ಮೂಲದ ಮೋಹನ್ (೪೪) ಎಂಬವರು ಹೃದಯಾ ಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಕಾವೇರಿ ನೀರು ಬಿಡುಗಡೆ ಸಂಬAಧ ಕಾನೂನು ವ್ಯವಸ್ಥೆಗಾಗಿ ಕೆಎಸ್‌ಆರ್‌ಪಿ ಮೈಸೂರು ಬೆಟಾಲಿಯನ್‌ನ ೨೩ ಸಿಬ್ಬಂದಿಗಳು ಎರಡು ದಿನಗಳ ಹಿಂದೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೋಹನ್ ಕೆ.ಎನ್. ಕೂಡ ಕೊಳ್ಳೆಗಾಲಕ್ಕೆ ತೆರಳಿದ್ದರು. ಅಲ್ಲಿನ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ದರು. ಶುಕ್ರವಾರ ಕರ್ತವ್ಯ ಮುಗಿಸಿ ಹಾಸ್ಟೆಲ್‌ನಲ್ಲಿದ್ದ ಮೋಹನ್ ಹೃದಯಾಘಾತ ಸಂಭವಿಸಿ ಮೃತಪಟ್ಟರು. ಅಂತ್ಯಕ್ರಿಯೆ ಶನಿವಾರ ಕುಂಜಿಲದಲ್ಲಿ ನೆರವೇರಿತು.

ಪೊಲೀಸ್ ಇಲಾಖೆ ಯಲ್ಲಿ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮೃತರು ವೀರಪ್ಪನ್ ಕಾರ್ಯಾಚರಣೆಯಲ್ಲಿ ಹಾಗೂ ನಕ್ಸಲೈಟ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದರು. ಇವರು ಕಕ್ಕಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದ ಕೈಬುಲಿರ ದಿ. ಸಿ. ನಾಣಯ್ಯ ಮತ್ತು ಲಲಿತ ದಂಪತಿ ಪುತ್ರ. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

-ದುಗ್ಗಳ