ಕೂಡಿಗೆ, ಆ. ೨೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದಲ್ಲಿರುವ ಹಾಡಿಯಾದ ಹುಣಸೆಪಾರೆ ಹಾಡಿ ಕಳೆದ ೩ ವರ್ಷಗಳಿಂದ ಹಾಡಿ ಜನರಿಗೆ ಅವರ ಜಾಗದಲ್ಲಿ ಮನೆಗಳ ನಿರ್ಮಾಣಕ್ಕೆ ಇಲಾಖೆಯ ಮೂಲಕ ಅನುದಾನ ಬಿಡುಗಡೆಯಾದರೂ ಸಹ ಮನೆಗಳ ನಿರ್ಮಾಣವಾಗಿಲ್ಲ. ಮನೆಗಳಿಗೆ ಕಳೆದ ಒಂದು ತಿಂಗಳುಗಳಿAದ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಡಿತಗೊಂಡಿದೆ. ಅಲ್ಲದೆ ಹಾಡಿಗೆ ತೆರಳುವ ರಸ್ತೆಯು ತೀರಾ ಹಾಳಾಗಿದೆ.
ಈ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಲು ಹಾಡಿಯ ಗ್ರಾಮಸ್ಥರು ಹಾಗೂ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯ ಅನಂತ್ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿಯನ್ನು ನೀಡಲಾಯಿತು.
ಕಳೆದ ಮೂರು ವರ್ಷಗಳಿಂದಲೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ.
ಈ ಹುಣಸೆಪಾರೆ ಕುರುಬ ಜನಾಂಗದ ಹಾಡಿಗೆ ತೆರಳುವ ಒಂದು ಕಿಲೋಮೀಟರ್ ರಸ್ತೆಯು ತೀರಾ ಹಾಳಾಗಿದ್ದು, ಇದರ ಸಮೀಪದಲ್ಲಿ ಜೇನುಕಲ್ಲು ಮೀಸಲು ಅರಣ್ಯ ಪ್ರದೇಶವಿದ್ದು ಕಾಡಾನೆಗಳ ಹಾವಾಳಿವಿದ್ದು, ರಸ್ತೆಯ ವ್ಯವಸ್ಥೆ ಸರಿ ಇಲ್ಲದೆ ತಿರುಗಾಡಲು ಸಹ ಬಾರಿ ತೊಂದರೆಗಳು ಅಗುತ್ತಿದೆ, ಹಾಡಿಯಲ್ಲಿ ೨೫ಕ್ಕೂ ಹೆಚ್ಚು ಕುಟುಂಬಗಳಿವೆ ಎಂದು ಹಾಡಿಯ ಜಿ.ಕೆ. ರಾಜು ತಿಮ್ಮಪ್ಪ, ಪ್ರವೀಣ್, ಸಚಿನ್, ಉಮೇಶ್ ತಿಳಿಸಿದ್ದಾರೆ.
ಹಾಡಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಅನಂತ ಅವರ ನೇತೃತ್ವದಲ್ಲಿ ಹಾಡಿಯ ಪ್ರಮುಖರು ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಸಂಬAಧಿಸಿದ ಇಲಾಖೆಯವರಿಗೆ ತಿಳಿಸುವಂತೆ ಹಾಗೂ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅನುದಾನದ ಅಧಾರದ ಮೇಲೆ ಹಾಡಿಯ ಅಭಿವೃದ್ಧಿಗೆ ಸಹಕಾರವನ್ನು ನೀಡುವಂತೆ ಮನವಿಯನ್ನು ಸಲ್ಲಿಸಿದ್ದಾರೆ.