ಮಡಿಕೇರಿ, ಆ. ೨೫: ಕಾರ್ಯ ನಿರ್ವಾಹಕ ಇಂಜಿನಿಯರ್ (ವಿದ್ಯುತ್) ಕೊಡಗು ಬೃಹತ್ ಕಾಮಗಾರಿ ವಿಭಾಗ ಕೆಪಿಟಿಸಿಎಲ್ ಮೈಸೂರು ನಿಗಮದ ವತಿಯಿಂದ ನಡೆಸಲಾಗುವ ೬೬ ಕೆ.ವಿ. ಮಡಿಕೇರಿ-ವೀರಾಜಪೇಟೆ ಸಂಪರ್ಕ ಮಾರ್ಗದಲ್ಲಿ ಬರುವ ಹಾಕತ್ತೂರು ಗ್ರಾಮದ ಟವರ್ ಸಂಖ್ಯೆ ೧೧೫ ರಿಂದ ೧೧೮ ರವರೆಗೆ ಸ.ನಂ. ೧೧೨/೨, ೧೧೨/೭, ಮತ್ತು ೧೧೨/೬, ೧೧೨/೪ ರ ರೈತರ ಜಮೀನುಗಳಲ್ಲಿ ಬರುವ ೯೨ ವಿವಿಧ ಜಾತಿಯ ಮರಗಳನ್ನು ಇಲಾಖಾ ವತಿಯಿಂದ ಕಡಿದು ತೆರವುಗೊಳಿಸಲು ಕೋರಿರುತ್ತಾರೆ.
ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ತಾ. ೨೮ ರೊಳಗೆ ಕಚೇರಿಗೆ ಸಲ್ಲಿಸಬೇಕಿದೆ. ಜೊತೆಗೆ ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.